Appeal for improvement of weavers' welfare 
ಜಿಲ್ಲೆ

ನೇಕಾರರ ಬುದುಕು ಸುಧಾರಣೆಗೆ ಮನವಿ

ಗುಳೇದಗುಡ್ಡ: ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ನೇಕಾರರು ವಾಸಿಸುತ್ತಿದ್ದು, ನೇಕಾರ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿರುವ ಇಲ್ಲಿನ ನೇಕಾರರ ಬದುಕು ಕಷ್ಟಕರವಾಗಿದೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಇಲ್ಲಿನ ನೇಕಾರರಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅವರ ಉದ್ಯೋಗಕ್ಕೆ ಪ್ರೋತ್ಸಾಹ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿಗಣೇಶ ಎನ್.ಜಿ. ಅವರಿಗೆ ಪಟ್ಟಣದ ನೇಕಾರ ಸಮುದಾಯಗಳ ವತಿಯಿಂದ ಮನವಿ ಸಲ್ಲಿಸಲಾಯಿತು.

ಪಟ್ಟಣದ ದೇವಾಂಗ ಸಮಾಜದ ಕಲ್ಯಾಣಮಂಟಪದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಿಗೆ ನೇಕಾರ ಸಮುದಾಯಗಳಿಂದ ಮನವಿ ಸಲ್ಲಿಸಲಾಗಿದ್ದು, ನಿಗಮದಿಂದ 2ಎ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಜಿಲ್ಲಾವಾರು ಯೋಜನೆ ರೂಪಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಿಜೆಪಿ ಜಿಲ್ಲಾ ನೇಕಾರ ಪ್ರಕೋಷ್ಠದ ಸಂಚಾಲಕ ಮಂಜುನಾಥ ಹಣಗಿ, ನೂರಂದಪ್ಪ ಮಳ್ಳಿ, ಶಿವು ಮನಗೂಳಿ, ರಾಘವೇಂದ್ರ ಚೌಡಾಪೂರ, ಸುರೇಶ ಬ್ಯಾಳಿ, ಬಸವರಾಜ ಮಿಣಜಗಿ, ಶ್ರೀಕಾಂತ ಕಲ್ಯಾಣಿ, ಹುಚ್ಚಪ್ಪ ಮರನಾಳ, ಲೋಕೇಶ ಉಂಕಿ, ಎಂ.ಎಂ. ಕಾಳಗಿ, ಎಸ್.ಪಿ. ಜವಳಿ, ಎಂ.ಎ. ಉಂಕಿ, ಗೋಪಾಲ ಪಪ್ತಿ, ನೀಲಕಂಠಪ್ಪ ಉಂಕಿ ಮತ್ತಿತರರು ಇದ್ದರು.