ಜಿಲ್ಲೆ

ನೆಹರು ಯುವ ಕೇಂದ್ರದಿಂದ ಶ್ರಮದಾನ


ಕೊಡಗು : ಚೆಂಬು ಗ್ರಾಮದ ಭಗವಾನ್ ಸಂಘದ ವತಿಯಿಂದ ಕೊಡಗು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರೃ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸೂಚನಾ ಫಲಕಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.


ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಪಾಜೆ ಹೋಬಳಿಯ ಕಲ್ಲುಗುಂಡಿ, ಕಡೆಪಾಲದಿಂದ ದೇವರಕೊಲ್ಲಿಯ ಗಾರೆಮುರಿವರೆಗೆ ರಸ್ತೆಯ ಅಂಚಿನಲ್ಲಿರುವ ಹೆದ್ದಾರಿ ಪ್ರಾಧಿಕಾರದ ಸೂಚನಾ ಫಲಕಗಳು, ಶಾಲಾ-ಕಾಲೇಜು, ದೇವಸ್ಥಾನಗಳ ನಾಮಫಲಕಗಳು, ಸ್ವಾಗತ ಕಮಾನುಗಳು ಮತ್ತು ಬಸ್ ತಂಗುದಾಣಗಳನ್ನು ಯಂತ್ರಗಳನ್ನು ಬಳಸಿ ಶುಚಿಗೊಳಿಸಿದರು. ಸ್ವಚ್ಛತಾ ಅಭಿಯಾನಕ್ಕೆ ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಚಾಲನೆ ನೀಡಿದರು. ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್, ಸಂಘದ ಗೌರವಾಧ್ಯಕ್ಷ ಅನಂತ್ ಊರುಬೈಲು, ಅಧ್ಯಕ್ಷ ಶರತ್ ಕಾಸ್ಪಾಡಿ ಶ್ರಮದಾನ ನಡೆಯಿತು.