ಜೇವರ್ಗಿ: ತಾಲೂಕಿನ ನೆಲೋಗಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳಲ್ಲಿ ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ, ಪ್ರೋತ್ಸಾಹಿಸಲಾಯಿತು.
ಪ್ರಮುಖರಾದ ನಿಂಗಣ್ಣ ಅಂಬಿಗೇರ, ಶ್ರೀಮಂತ ಅಳ್ಳಗಿ, ಭಗವಂತ್ರಾಯ ಚೌಡಾಪುರ, ಚಂದ್ರಕಾಂತ ಕಾಚಾಪುರ, ನಿಂಗಣ್ಣ, ಶ್ರೀಶೈಲ ನಂದಿಗೊಂಡ, ಮಹಾಂತಪ್ಪ ನಡಗಟ್ಟಿ, ದೇವಿಂದ್ರಪ್ಪ ಹಿಪ್ಪರಗಿ, ಬಾಬುಗೌಡ ವಿಭೂತಿ ಇತರರಿದ್ದರು.