ಕಲಬುರಗಿ: ಯುಜಿಸಿ ನೆಟ್ನಲ್ಲಿ ಉತ್ತರ‍್ಣರಾಗಲು ಕೇಂದ್ರೀಕೃತ ಅಧ್ಯಯನ ಬಹಳ ಮುಖ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯ ಡೀನ್ ಪ್ರೊ.ಜಿ.ಆರ್.ಅಂಗಡಿ ಹೇಳಿದರು.
ಕಡಗಂಚಿಯಲ್ಲಿನ ರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಯುಜಿಸಿ& ಜೆಆರ್ಎಫ್/ ನೆಟ್ ತರಬೇತಿ ಕರ‍್ಯಾಗಾರದಲ್ಲಿ ಮಾತನಾಡಿ, ಜೆಆರ್ಎಫ್/ನೆಟ್ ಪರೀೆಯ ಸಿದ್ಧತೆಗೆ ನಿತ್ಯ ಕನಿಷ್ಟ ಎರಡು ಗಂಟೆ ನಿರಂತರ ಅಧ್ಯಯನ ಅಗತ್ಯ. ಹೀಗೆ ಒಂದು ತಿಂಗಳವರೆಗೆ ಅಭ್ಯಾಸದತ್ತ ಗಮನಹರಿಸಿದರೆ ಖಂಡಿತವಾಗಿ ನೆಟ್ ಪರೀೆಯಲ್ಲಿ ಉತ್ತರ‍್ಣರಾಗುತ್ತೀರಿ. ಪ್ರತಿಯೊಬ್ಬ ವಿದ್ಯರ‍್ಥಿಯು ಪಿಜಿ ಪರ‍್ಣಗೊಳಿಸುವ ಮೊದಲು ಜೆಆರ್ಎಫ್/ನೆಟ್ನಲ್ಲಿ ಉತ್ತರ‍್ಣರಾಗುವ ಗುರಿ ಹೊಂದಿರಬೇಕು. ಶಿಕ್ಷರಾಗಲು ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಿಎಚ್.ಡಿ ಮಾಡಲು ಬಯಸಿದರೆ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ಜೆಆರ್ಎಫ್ನಲ್ಲಿ ಉತ್ತರ‍್ಣರಾಗಬೇಕು ಎಂದು ಹೇಳಿದರು.
ಶಿಕ್ಷಣ ವಿಭಾಗದ ಇಬ್ಬರು ಜೂನಿಯರ್ ರಿರ‍್ಚ್ ಫೆಲೋಗಳಾದ ದರ‍್ಗಾ ಪ್ರಸಾದ್ ಮತ್ತು ಅಶ್ವಿನ್, ಜೆಆರ್ಎಫ್/ ನೆಟ್ ಪರೀೆಯ ತಮ್ಮ ಯಶಸ್ಸಿನ ಅನುಭವ ಹಂಚಿಕೊಂಡರು.
ಅಧ್ಯಾಪಕರಾದ ಡಾ.ಆಶಾಲತಾ, ಡಾ.ನಿಶಾ ಪ್ರಜಾಪತಿ, ಡಾ.ಶ್ರೀದೇವಿ, ಡಾ.ಸಿ.ಮಂಡಲ್, ಡಾ.ಬಿ.ಪಿ.ರೆಡ್ಡಿ, ಜ್ಯೋತ್ಸಾ$್ನ, ಸಂತೋಷ ಇತರರಿದ್ದರು. ಸಂಯೋಜಕ ಡಾ.ಎನ್.ಅಮರೇಶ್ವರನ್ ಸ್ವಾಗತಿಸಿ, ನಿರೂಪಣೆ ಮಾಡಿದರು. ಡಾ.ಮಯೂರ್ ಪೂಜಾರಿ ವಂದಿಸಿದರು.