ಹಾಸನ: ಪ್ರಧಾನಿ ನರೇಂದ್ರ ಮೋದಿ ಅಗೆ 75 ವರ್ಷವಲ್ಲ, ನೂರು ವರ್ಷ ದಾಟಿದರೂ ಅವರ ಹುಮ್ಮಸ್ಸು ಕುಗ್ಗುವುದಿಲ್ಲ. ಅಂತಹ ಉತ್ತಮ ವ್ಯಕ್ತಿತ್ವ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಆರೋಗ್ಯ, ಆಯಸ್ಸು ಹಾಗೂ ದೇಶ ಸೇವೆ ಮಾಡಲು ಇನ್ನಷ್ಟು ಶಕ್ತಿ ಕೊಡಲೆಂದು ಪ್ರಾರ್ಥಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ 74ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಸಿಹಿ, ಮಜ್ಜಿಗೆ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಊಟ ಉಪಚಾರ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜೀವನವನ್ನು ಸಂಪೂರ್ಣವಾಗಿ ರಾಷ್ಟ್ರಕ್ಕಾಗಿ ಮುಡುಪಾಗಿಟ್ಟಂತಹ ಹೆಮ್ಮೆಯ ವ್ಯಕ್ತಿತ್ವ ಮೋದಿ ಅವರದು. ಈ ರಾಷ್ಟ್ರ ಕಂಡಂತಹ ಜನಪ್ರಿಯ ಪ್ರಧಾನಮಂತ್ರಿ. ರಾಷ್ಟ್ರಗಳಲಿ ಬದಲಾವಣೆ ತಂದಂತಹ ಹರಿಕಾರ ಎಂದರು.
ಇಂದಿನಿಂದ 15 ದಿನಗಳ ಕಾಲ ಸೇವಾ ಪಾಕ್ಷಿಕ ಹೆಸರಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯತ್ವ ಅಭಿಯಾನದಿಂದ ಪ್ರಾರಂಭವಾಗಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ, ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಅ.2ರವರೆಗೂ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಿರಿಯರೊಂದಿಗೆ ಎಲ್ಲ ಕಾರ್ಯಕರ್ತರೊಡನೆ ಜನ್ಮ ದಿನಾಚರಣೆ ಮಾಡಲಾಗಿದೆ. ಕಚೇರಿ ಮುಂದೆ ನಾಗರಿಕ ಬಂಧುಗಳಿಗೆ ಸಿಹಿ ಮತ್ತು ಮಜ್ಜಿಗೆ ವಿತರಣೆ ಮಾಡಲಾಗಿದೆ. ಸರ್ಕಾರಿ ಜಿಲ್ಲಾ ಆಸ್ಪತ್ರೆ ಒಳ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮ ಜಿಲ್ಲೆಗೆ ಸೀಮಿತವಾಗದೆ ಇದೊಂದು ರಾಷ್ಟ್ರೀಯ ಹಬ್ಬವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಇದೆ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಬಿ.ಎಚ್. ನಾರಾಯಣಗೌಡ, ಶೋಭನ್ ಬಾಬು, ಪ್ರೀತಿವರ್ಧನ್, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಎಚ್. ನಾರಾಯಣಗೌಡ, ನಗರಾಧ್ಯಕ್ಷ ಮಂಜು, ಹರ್ಷಿತ್, ವಿಜಯಲಕ್ಷ್ಮೀ ಅಂಜನಪ್ಪ, ವೇದಾವತಿ, ಚನ್ನಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.