ನರೇಗಲ್ಲ: ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ್ದರಿಂದ ಕೆಲವೆಡೆ ಕಳ್ಳಬಟ್ಟಿಯ ಕರಾಳ ದಂಧೆ ಶುರುವಾಗಿದೆ. ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಪಟ್ಟಣದ ಕೆಲ ಮನೆಗಳ ಮೇಲೆ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿ ಅಪಾರ ಪ್ರಮಾಣದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಟ್ಟಣದ ಜಕ್ಕಲಿ ರಸ್ತೆಯಲ್ಲಿನ ಕೆಲ ಮನೆಗಳ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಮತ್ತು ನರೇಗಲ್ಲ ಪೊಲೀಸ್ ಠಾಣೆ ಸಿಬ್ಬಂದಿ ಸುಮಾರು 200ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ. ದಾಳಿಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ಕೆಲ ದಂಧೆಕೋರರು ಕಳ್ಳಭಟ್ಟಿಯನ್ನು ಚರಂಡಿಗೆ ಸುರಿದಿದ್ದಾರೆ.
ಕಳ್ಳಭಟ್ಟಿ ನಾಶಪಡಿಸಲು ಮುಂದಾಗುತ್ತಿದ್ದಂತೆಯೇ ಅಧಿಕಾರಿಗಳ ಜತೆಗೆ ಸ್ಥಳೀಯ ಮಹಿಳೆಯರು ವಾಗ್ವಾದ ನಡೆಸಿದರು. ನರೇಗಲ್ಲ ಪಿಎಸ್ಐ ಬಿ.ಬಿ. ಕೊಳ್ಳಿ, ಪೇದೆಗಳಾದ ಹನುಮಂತ ದೊಡ್ಡಮನಿ, ಮಂಜುನಾಥ ಮುಳಗುಂದ, ನಾಗರಾಜ ಮಂಗಳೂರ, ಬಸವರಾಜ ಕುರಿ, ಹನುಮಂತ ಡಂಬಳ, ಎಂ.ಎಸ್. ಬೂಸಗತ್ತಿ, ಆರ್.ಎಚ್. ಕಪ್ಪತನವರ, ಶಿವಕುಮಾರ ಚಂಡೂರ ಇದ್ದರು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.