ಬಾಗಲಕೋಟೆ: ಇಲ್ಲಿನ ನವನಗರದಲ್ಲಿರುವ ನಗರಸಭೆ ಆವರಣದಲ್ಲಿ ೨.೮೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸಭಾಭವನವನ್ನು ಬುಧವಾರ ಶಾಸಕ ವೀರಣ್ಣ ಚರಂತಿಮಠ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಬಾಗಲಕೋಟೆ ಗ್ರೇಡ್-೨ ನಗರಸಭೆಯನ್ನು ಗ್ರೇಡ್ ೧ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಮಹಾನಗರ ಪಾಲಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನೂತನ ಸಭಾಂಗಣ ೨.೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. ನಗರ ಸಭೆ ಸದಸ್ಯರು, ಅಽಕಾರಿಗಳಿಗೆ ಆಸನದ ವ್ಯವಸ್ಥೆ ಮತ್ತು ಮಾಧ್ಯಮ ಬಂಧುಗಳಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಗ್ಯಾಲರಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಮುಂಬರುವ ನಗರಸಭೆ ಸಾಮಾನ್ಯ ಸಭೆಯನ್ನು ನೂತನ ಸಭಾಂಗಣದಲ್ಲಿ ಮಾಡುವಂತೆ ನಗರಸಭೆ ಅಧ್ಯಕ್ಷರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನೂತನ ಸಭಾಂಗಣದಲ್ಲಿ ಬೆಳಗ್ಗೆ ಹೋಮ ಹವನಗಳು, ವಾಸ್ತು ಪೂಜೆ, ಲಕ್ಷ ಪೂಜೆ ಸೇರಿದಂತೆ ಲಕ್ಷ್ಮೀ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಷಿ, ನಗರಸಭೆ ಸರ್ವ ಸದಸ್ಯರುಗಳು. ನಗರಸಭೆ ಆಯುಕ್ತ ವಾಸಣ್ಣ ಆರ್., ಬುಡಾ ಆಯುಕ್ತ ಗಣಪತಿ ಪಾಟೀಲ, ರಾಜು ನಾಯ್ಕರ, ರಾಜು ರೇವಣಕರ, ಶಿವಾನಂದ ಟವಳಿ ಇತರರು ಇದ್ದರು.