ಜಿಲ್ಲೆ

ನೂತನ ಶಾಸಕ ಹೆಚ್.ಪಿ. ಸ್ವರೂಪ್ ಶ್ರೀ ಜವೇನಹಳ್ಳಿ ಮಠಕ್ಕೆ ಭೇಟಿ

ಹಾಸನ: ನೂತನ ಶಾಸಕರಾಗಿ ಆಯ್ಕೆಯಾದ ಹೆಚ್.ಪಿ. ಸ್ವರೂಪ್ ಮಾದಲ ಬಾರಿಗೆ ನಗರದ ಶ್ರೀ ಜವನಹಳ್ಳಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀ ಸಂಗೇಮೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಸ್ವರೂಪ್ ಪ್ರಕಾಶ್ ಮಾತಾನಾಡಿ, ಹಾಸನ ಕ್ಷೇತ್ರದ ಮಠ ಮಾನ್ಯಗಳು ಹಾಗೂ ವೀರಶೈವ ಲಿಂಗಾಯತ ಸಮಾಜದವರು ನನಗೆ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಮ್ಮ ತಂದೆಯವರು ಎಲ್ಲಾ ಸಮಾಜದವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಅದೇ ನನ್ನ ಗೆಲುವಿಗೆ ಸಹಾಯವಾಯಿತ್ತು. ನಾನು ಎಲ್ಲಾ ಸಮಾಜದವರಿಗೆ ನನ್ನ ಕೈಲಾದ ಸಹಾಯ ಮಾಡಲು ಶ್ರಮಿಸುವುದು ನನ್ನ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜವೇನಹಳ್ಳಿ ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ಬ್ಯಾಂಕ್ ಪರಮಶಿವಯ್ಯ, ಅವೀನಾಶ್, ಇರರು ಇದ್ದರು.