ಜಿಲ್ಲೆ

ನೂತನ ಪ್ರಯೋಗಾಲಯ ಉದ್ಘಾಟನೆ

ಬೆಳಗಾವಿ: ನಗರದ ಕೆಎಲ್‌ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆಯ (ಜಿಐಟಿ) ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಫ್‌ಒಎಸ್‌ಆರ್‌ಒಸಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಿಂದ ನೂತನ ವಸ್ತು ಪರೀಕ್ಷಾ (ಮಟೆರಿಯಲ್ ಟೆಸ್ಟಿಂಗ್) ಪ್ರಯೋಗಾಲಯ ಆರಂಭಿಸಲಾಗಿದೆ.

ಎಫ್‌ಒಎಸ್‌ಆರ್‌ಒಸಿ ಬೆಂಗಳೂರು ಶಾಖೆ ಪ್ರಧಾನ ವ್ಯವಸ್ಥಾಪಕ ಶಂಕರ ಕೊಟ್ಟೂರ್ ಮತ್ತು ಕೆಎಲ್‌ಎಸ್ ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವ್ಕರ ಶನಿವಾರ ಪ್ರಯೋಗಾಲಯ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥ ಡಾ.ವೈಭವ ಚಾಟೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಬೆಳೆಸಲು ಸುಧಾರಿತ ಪರೀಕ್ಷಾ ಮೂಲಸೌಕರ್ಯ ಪ್ರಮುಖವಾಗಿರಬೇಕು.

ಇದಕ್ಕೆ ಪೂರಕವಾಗಿ ನೂತನ ಪ್ರಯೋಗಾಲಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನ ಮತ್ತು ಆಧುನಿಕ ಸಂಶೋಧನೆ ಕೈಗೊಳ್ಳಲು ಸಹಾಯಕವಾಗಲಿದೆ ಎಂದರು. ಆಡಳಿತ ವಿಭಾಗದ ಡೀನ್ ಪ್ರೊ.ಡಿ.ಎ.ಕುಲಕರ್ಣಿ ಮಾತನಾಡಿ, ಈ ಪ್ರಯೋಗಾಲಯವು ವಿದ್ಯಾರ್ಥಿಗಳ ಮಟೆರಿಯಲ್ ಅಧ್ಯಯನದ ಬಲ ಮತ್ತು ಗುಣಲಕ್ಷಣಗಳ ವಿಶ್ಲೇಷಣೆಗೆ ಅಗತ್ಯವಿರುವ ವಿವಿಧ ಆಯಾಮ ಪೂರೈಸಲು ಸಜ್ಜುಗೊಂಡಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.