ಜಾನಕಿ ಕೆ.ಎಂ  
ಜಿಲ್ಲೆ

ನೂತನ ಜಿಲ್ಲಾಧಿಕಾರಿ ಜಾನಕಿ ಅಧಿಕಾರ ಸ್ವೀಕಾರ

ಬಾಗಲಕೋಟೆ: ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನಂಬಿಕೆ ಬರುವ ರೀತಿಯಲ್ಲಿ ಉತ್ತಮ ಕೆಲಸ ನಿರ್ವಹಿಸುವುದಾಗಿ ಬಾಗಲಕೋಟೆ ನೂತನ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ನಗರದಲ್ಲಿ ಸೋಮವಾರ ಬಾಗಲಕೋಟೆ ಜಿಲ್ಲಾಽಕಾರಿಯಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಸರ್ಕಾರ ಜನಸಾಮಾನ್ಯರಿಗೆ ಸ್ಪಂದಿಸುತ್ತಿರುವ ಬಗ್ಗೆ ನಂಬಿಕೆ ಬರಬೇಕು. ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಿದೆ. ವ್ಯಕ್ತಿಯ ಪ್ರಚಾರಕ್ಕಿಂತ ಕೆಲಸ ಪ್ರಚಾರ ಮುಖ್ಯವಾಗಿದೆ ಎಂದರು.

ಹಾಸನ ಜಿಲ್ಲೆಯ ಕೊಣನೂರ ಗ್ರಾಮದವರಾದ ಜಿಲ್ಲಾಽಕಾರಿಗಳು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ೧೯೯೯ನೇ ಸಾಲಿನಲ್ಲಿ ಕರ್ನಾಟಕ ಆಡಳಿತ ಸೇವೆ ಅಽಕಾರಿಯಾಗಿ ಆಯ್ಕೆಗೊಂಡು ದಾವಣಗೇರಿಯಲ್ಲಿ ಉಪವಿಬಾಗಾಽಕಾರಿಯಾಗಿ ಮತ್ತು ಸಬ್ ಡಿವಿಜನ್ ಮ್ಯಾಜಸ್ಟ್ರೇಟ್ ಆಗಿ ಕೆಲಸ ನಿರ್ವಹಿಸಿದ್ದೇನೆ. ೨೦೧೧-೧೨ ರಲ್ಲಿ ಕಿದ್ವಾವಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಽಕಾರಿಯಾಗಿ, ೨೦೧೨-೧೩ ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಽಕಾರ ಕಾರ್ಯದರ್ಶಿಯಾಗಿ, ೨೦೧೩-೧೪ರಲ್ಲಿ ಕರ್ನಾಟಕ ರಾಜ್ಯದ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿರುವುದಾಗಿ ತಿಳಿಸಿದರು.

೨೦೧೪-೧೫ ರಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ, ೨೦೧೫-೧೬, ೨೦೧೬-೧೭ರಲ್ಲಿ ಹಾಜನ ಜಿಲ್ಲೆಯ ಹೆಚ್ಚುವರಿ ಜಿಲ್ಲಾಽಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ೨೦೧೭-೧೮ ರಲ್ಲಿ ಭಾರತೀಯ ಆಡಳಿತ ಸೇವೆಯಲ್ಲಿ ಮುಂಬಡ್ತಿ ಪಡೆದು ಹಾಸನದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಽಕಾರಿಯಾಗಿ ಮತ್ತು ೨೦೧೭-೧೮ ರಲ್ಲಿ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
೨೦೧೮-೧೯ ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಂತರ ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಬೆಂಗಳೂರಿನಲ್ಲಿ ಜಂಟಿ ನಿರ್ದೇಶಕರಾಗಿ (ಸುಧಾರಣೆ) ನಂತರ ಸಕಾಲ ಮಿಷನ್‌ದಲ್ಲಿ ಅಪರ ಮಿಷನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಬಾಗಲಕೋಟೆ ಜಿಲ್ಲಾಽಕಾರಿಯಾಗಿ ಅಽಕಾರ ವಹಿಸಿಕೊಂಡಿರುವದಾಗಿ ತಿಳಿಸಿದರು.