ಜಿಲ್ಲೆ

ನೂತನ ಅಧ್ಯಕ್ಷರಾಗಿ ತಮ್ಮಣ್ಣ ಅವಿರೋಧ ಆಯ್ಕೆ

ಯಾದಗಿರಿ: ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಜಿ.ತಮ್ಮಣ್ಣ ಗುರಮಠಕಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶಂಕರ ಗೋಪಾಲ ತಿಳಿಸಿದರು.

ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಮಾತನಾಡಿದ ತಮ್ಮಣ್ಣ, ಇನ್ನುಳಿದ ಅವಧಿಗೆ ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲ ನಿದರ್ೇಶಕರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮೆಲ್ಲರ ಸಹಕಾರದೊಂದಿಗೆ ರೈತರ ಏಳಿಗೆಗಾಗಿ ಕೆಲಸ ಮಾಡಿಕೊಂಡು ಜಿಲ್ಲೆಯಲ್ಲಿ ಸಂಘಕ್ಕೆ ಉನ್ನತ ಹೆಸರನ್ನು ತರುತ್ತೇನೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಸ್ವಾಮಿದೇವ ದಾಸನಕೇರಿ, ಸಿದ್ದಪ್ಪ ಹೊಟ್ಟಿ. ಗುಂಡೆರಾವ ಪಂಚಹತ್ರಿ, ಗೊವಿಂದಪ್ಪ ಠಾಣಗುಂದಿ, ಮಲ್ಲಿನಾಥ ಆಯರಕರ್, ಅಯ್ಯಣ್ಣ ಗೌಡ ಕ್ಯಾಸಪನಳ್ಳಿ, ಬಸಣ್ಣಗೌಡ ಮಗ್ದಂಪೂರ, ಮಲ್ಲರೆಡ್ಡಿ ಬಂದಳ್ಳಿ, ರವೀಂದ್ರ ಗೂಂಜನೂರ, ಯಲ್ಲಪ್ಪ ಗಾಜರಕೋಟ, ಸಂಗಮ್ಮ ಅಕ್ಕಿ ದೊಡ್ಡಯ್ಯ ಸ್ವಾಮಿ, ಪ್ರಶಾಂತ ಹಂಚಾಟೆ, ಮಲ್ಲು ಇದ್ದರು.