ಕಲಬುರಗಿ: ಶರಣ ನುಲಿಯ ಚಂದಯ್ಯ ಜಯಂತಿ ಆ.೧೯ರಂದು ಅದ್ದೂರಿಯಾಗಿ ಆಚರಿಸುವಂತೆ ಚುನುವಣಾ ತಹಸೀಲ್ದಾರ್ ಪಂಪಯ್ಯ ಸೂಚಿಸಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿದ ಅವರು, ೧೯ರಂದು ಮಧ್ಯಾಹ್ನ ೧ಕ್ಕೆ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಆಗಮಿಸಿ ಯಶಸ್ವಿಗೊಳಿಸಬೇಕು. ಸರ್ಕಾರಿ, ಅರೆಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಬೆಳಗ್ಗೆ ೯ಕ್ಕೆ ಜಯಂತಿ ಆಚರಿಸಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸಲಾಗುವುದು. ಉಪನ್ಯಾಸ ನೀಡಲು ಅನುಭವಿ ಪ್ರಾಧ್ಯಾಪಕರನ್ನು ಆಹ್ವಾನಿಸಬೇಕು ಎಂದು ಸಮಾಜದ ಮುಖಂಡರು ಸೂಚಿಸಿದರು. ಪ್ರಮುಖರಾದ ಬಾಬುರಾವ ಜಾಧವ್, ರಮೇಶ ಜಾಧವ್, ಸೈಬಣ್ಣ ಬಜಂತ್ರಿ, ಪ್ರಕಾಶ ಬಜಂತ್ರಿ, ಶರಣು ಬಜಂತ್ರಿ, ಸುಭಾಶ ಬಜಂತ್ರಿ, ಜಗನ್ನಾಥ ಬಜಂತ್ರಿ, ಶರಣಬಸಪ್ಪ ಬಜಂತ್ರಿ, ಸಂಗೀತ ಆಳಂದ ಇತರರಿದ್ದರು.