ಜಿಲ್ಲೆ

ನುಡಿಗೆ ನೃತ್ಯ ವೈಭವದ ಸಿರಿಯ ಸ್ಪರ್ಷ

ಕಲಬುರಗಿ: ಇಳಿ ಸಂಜೆಯ ತಂಗಾಳಿಯಲ್ಲಿ ಭರತನಾಟ್ಯದ ವೈಭವ, ಯಕ್ಷಗಾನದಲ್ಲಿ ಕೃಷ್ಣ ರಾಕ್ಷಸಿಯನ್ನು ವಧಿಸಿದ ಕಥಾ ಹಂದರ, ವೇದಿಕೆಗೆ ಸದ್ದಿನ ಶ್ರೀಮಂತಿಕೆ ತಂದ ಡೊಳ್ಳು ಕುಣಿತ, ಮಲ್ಲಗಂಬದಲ್ಲಿ ಶಕ್ತಿಯ ಸಂದೇಶ ಸಾರಿದ ಭೀಮನ ಕಥಾ ಹಂದರ, ದೇಶ ಭಕ್ತಿ ಅನುರಣಿಸಿದ ವಂದೇ ಮಾತರಂ ನೃತ್ಯಕ್ಕೆ ಮನಸೋತ ಪ್ರೇಕ್ಷಕ ಗಣ...

ಇಂತ ಸಿರಿ ವೈಭವದ ಅಪರೂಪದ ನೃತ್ಯದ ಮೆರಗಿನ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಆಳ್ವಾಸ್ ನುಡಿಸಿರಿ ಜಿಲ್ಲಾ ಘಟಕ ಹಮ್ಮಿಕೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ಆಳ್ವಾಸ್‌ನ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯದ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದರು. ಕತಕ್ ನೃತ್ಯ, ಮಣಿಪುರದ ಸ್ಟಿಕ್ ನೃತ್ಯ, ಗುಜರಾತ್‌ನ ಗಾರ್ಬಾ, ದಾಂಡಿಯಾ, ಪಶ್ಚಿಮ ಬಂಗಾಳದ ಪುರಿರ್ಬೋ ಸೇರಿ ದೇಶದ ವಿವಿಧೆಡೆಯ ನೃತ್ಯ ಪ್ರಕಾರಗಳು ಒಂದೇ ವೇದಿಕೆಯಲ್ಲಿ ಏಕಕಾಲಕ್ಕೆ ಪ್ರಸ್ತುತ ಪಡಿಸಿ, ಬಿಸಿಲೂರಿನ ಜನಕ್ಕೆ ಸಾಂಸ್ಕೃತಿಕ ವೈಭವದ ತಂಪನೆರೆದರು.

ಸAಸ್ಕೃತಿ ಎತ್ತಿ ಹಿಡಿದ ಆಳ್ವಾ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಡಾ.ಮೋಹನ್ ಆಳ್ವಾ ಅವರು ನಾಡಿನ ಸಾಹಿತ್ಯ, ಶಿಕ್ಷಣ ಹಾಗೂ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ನಗರ ಪೊಲೀಸ್ ಆಯುಕ್ತ ಶರಣಪ್ಪ ಡಿ. ಅತಿಥಿಯಾಗಿದ್ದರು. ಖ್ಯಾತ ವೈದ್ಯ ಸಂಶೋಧಕ ಡಾ.ಪಿ.ಎಸ್.ಶಂಕರ ಅಧ್ಯಕ್ಷತೆ ವಹಿಸಿದ್ದರು. ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್, ಬಂದೇನವಾಜ್ ದರ್ಗಾದ ಸೈಯದ್ ಶಾ ಯದ¯್ಲÁಹಾ ಹುಸೇನಿ, ಫಾದರ್ ಡಾ.ವಿನ್ಸೆಂಟ್ ಪಿರೇರಾ, ಪ್ರೇಮಿಳಾ ಎಂಬ.ಕೆ, ಶರಣು ಪಪ್ಪಾ, ವಿಜಯಕುಮಾರ ತೇಗಲತಿಪ್ಪಿ, ಡಾ.ವೀಣಾ ಸಿದ್ದಾರಡ್ಡಿ, ಸುದರ್ಶನ, ಜೀವನ್ ಇತರರಿದ್ದರು. ಅಪ್ಪಾರಾವ ಅಕ್ಕೋಣಿ ಸ್ವಾಗತಿಸಿದರು. ಡಾ.ಸದಾನಂದ ಪೆರ್ಲಾ ನಿರೂಪಣೆ ಮಾಡಿ, ವಂದಿಸಿದರು.