ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಗ್ರಾಮದೇವತೆ ನುಗ್ಗೆಹಳ್ಳಿ ಅಮ್ಮನವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಮೂಲ ದೇವರಿಗೆ ಅಭಿಷೇಕ, ಸಂಜೆ ಗಂಗಾ ಪೂಜೆ, ಅಮ್ಮನವರ ಬೆಳ್ಳಿ ಪಲ್ಲಕ್ಕಿ ಉತ್ಸವ, ನೈವೇದ್ಯದ ನಂತರ ಬನ್ನಿ ಮರದವರೆಗೂ ರಥ ಸಾಗಿ ವಾಪಸಾಯಿತು. ಬಸವನಪುರ, ಮುದ್ದನಹಳ್ಳಿ, ಜಿ.ಎನ್.ಕೊಪ್ಪಲು, ವಿರೂಪಾಕ್ಷಿಪುರ, ಹೂವಿನಹಳ್ಳಿ, ಸಮುದ್ರವಳ್ಳಿ, ಹುಲಿಕೆರೆ, ಹೊನ್ನ ಮಾರನಹಳ್ಳಿ, ಅಕ್ಕನಹಳ್ಳಿ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು, ದವನ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.