ಕಲಬುರಗಿ: ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಬಳಿಯಲ್ಲಿ ರೈಲ್ವೆ ಡಬ್ಲಿಂಗ್ ಮತ್ತು ಸೇತುವೆ ನಿರ್ಮಿಸುವ ಕಾಮಗಾರಿಗೆ ಅಗತ್ಯವಿರುವ 4 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಸಂಸದ ಉಮೇಶ ಜಾಧವ್ ಅವರು ಸರ್ಕಾರಕ್ಕೆ ಕೋರಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿ ನೀಲೂರ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮೂಲಕ ರೈತರಿಗೆ ಮತ್ತು ಜನರಿಗೆ ಅನುವು ಮಾಡಿಕೊಡಬೇಕು. ಈ ಬೇಡಿಕೆ ಮುಂದಿರಿಸಿಕೊಂಡು ಜನರು ಹೋರಾಟ ನಡೆಸಿದ್ದಾರೆ. ಸ್ಪಂದಿಸಲು ಮನವಿ ಮಾಡಿದರು.
ನೀಲೂರ ಗ್ರಾಮದ ಜನರು ಕಲಬುರಗಿಗೆ ಬರಲು ಮತ್ತು ರೈತರು ತಮ್ಮ ಜಮೀನುಗಳಿಗೆ ಹೋಗಲು ರೈಲ್ವೆ ಡಬ್ಲಿಂಗ್ ಕಾಮಗಾರಿಯ ಬಳಿಯಲ್ಲಿ ಸೇತುವೆ ನಿಮರ್ಿಸುವುದು ಅಗತ್ಯವಾಗಿದೆ. ಗ್ರಾಮದಲ್ಲಿ ಮೆಹಬೂಬ ಸುಭ್ಹಾನಿ ದಗರ್ಾವಿದ್ದು ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ತೆಲಂಗಾಣದಿಂದ ಭಕ್ತರು ಬರುತ್ತಾರೆ. ಓಡಾಡಲು ಈ ರಸ್ತೆ ಅವಲಂಬಿಸಿರುವುದರಿಂದ ರೈಲ್ವೆ ಸೇತುವೆ ಕೆಲಸಕ್ಕಾಗಿ ಹಣ ಬಿಡುಗಡೆ ಮಾಡಬೇಕು ಎಂದು ಸಂಸದ ಜಾಧವ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದಶರ್ಿಗಳು ಅಗತ್ಯ ಹಣ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸೊಲ್ಲಾಪುರ ರೈಲ್ವೆ ವಿಭಾಗದ ಅಧಿಕಾರಿ ರವೀಂದ್ರ ಸಿಂಗಾಲ್, ಬಿಜೆಪಿ ಮುಖಂಡ ವಿಠ್ಠಲ್ ಜಾಧವ್ ಇತರರಿದ್ದರು.