ರಬಕವಿ-ಬನಹಟ್ಟಿ: ಬನಹಟ್ಟಿಯ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಮಾರುತಿ ದೇವರ ಜಾತ್ರೆ ನಿಮಿತ್ತ ಬುಧವಾರ ಸಂಜೆ ನೀರೋಕುಳಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಮಧ್ಯಾಹ್ನ ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಹೊಂಡಕ್ಕೆ ನೀರು ತುಂಬಿದರು. ಸಂಜೆ 5ಕ್ಕೆ ನೂರಕ್ಕೂ ಅಧಿಕ ಯುವಕರ ತಂಡ ಹೊಂಡದಲ್ಲಿನ ನೀರನ್ನು ತುಂಬಿಕೊಂಡು ಎದುರಾಳಿಗಾರರನ್ನಾಗಿಸಿ ಎಸೆಯುತ್ತಲೇ ಇದ್ದರು.
ಹಿರಿಯರಾದ ನಾಗಪ್ಪ ಬಕರೆ ಹೊಂಡದ ಪೂಜೆ ಮಾಡಿ ನೀರೋಕುಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಈರಣ್ಣ ಹೊನವಾಡ, ಕುಮಾರ ಬಕರೆ, ಪ್ರಶಾಂತ ಕೊಳಕಿ, ಮಹಾಶಾಂತ ಶೆಟ್ಟಿ, ಗಿರೀಶ ಹಾಸೀಲಕರ, ವಾಸು ಕೋಪರ್ಡೆ, ಬಾಳು ಶ್ರೀಶೈಲ ಗಣೇಶನವರ, ಶ್ರೀಶೈಲ ಹೊನವಾಡ, ರಾಮು ಕೋಪರ್ಡೆ, ಮಹಾಂತೇಶ ಜಾಲಿಕಟ್ಟಿ, ಮುಕುಂದ ಕೋಪರ್ಡೆ, ಗಂಗಪ್ಪ ಗೋಂದಕರ, ಬಾಳು ಗಣೇಶನವರ, ಮಾದೇವ ಬಸ್ಮೆ, ರಾಜು ಬಂಡಿಗಣಿ, ರಮೇಶ ಬೆಳ್ಳಗಿ, ಕಿರಣ ಭಸ್ಮೆ, ಆತ್ಮಾರಾಮ ಬಕರೆ, ಚಂದು ಗೋಂದಕರ, ಶ್ರೀಶೈಲ ಬಂಡಿಗಣಿ, ಮಹಾಂತೇಶ ಜಾಲಿಕಟ್ಟಿ, ಮಾನಿಂಗ ಕೋಪರ್ಡೆ, ಬಾಳಕೃಷ್ಣ ಹಾಸೀಕರ, ಮಹಾದೇವ ಕೋಪರ್ಡೆ ಇದ್ದರು.