ಜಿಲ್ಲೆ

ನೀರು ಸಂರಕ್ಷಣೆಗೆ ಶ್ರಮಿಸೋಣ

ಪರಮಾನಂದವಾಡಿ: ಸಕಲ ಜೀವ ರಾಶಿಗೆ ನೀರು ಅಮೃತವಿದ್ದಂತೆ. ನೀರು ಮಿತವಾಗಿ ಬಳಸುವ ಮೂಲಕ ನೀರಿನ ಹಾಹಾಕಾರ ತಡೆಯಲು ಎಲ್ಲರೂ ಶ್ರಮಿಸೋಣ ಎಂದು ಇತಿಹಾಸ ಸಂಯೋಜಕ ಡಾ.ಶಿವಾನಂದ ಹೆಳವರ ಹೇಳಿದರು.

ಸಮೀಪದ ಸಿದ್ದಾಪುರ ಗ್ರಾಮದಲ್ಲಿ ಜೆಪಿ ಶಿರಗೂರಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ನೀರಿನ ಬಳಕೆ ಮಹತ್ವ ಹಾಗೂ ಅರಣ್ಯ ಸಂರಕ್ಷಣೆ ವಿಷಯ ಕುರಿತು ಮಾತನಾಡಿದರು.

ಉಪನ್ಯಾಸಕ ಡಿ.ಎಂ. ದುರದುಂಡಿ ಮಾತನಾಡಿ, ಅರಣ್ಯ ಸಂರಕ್ಷಣೆ ಮಾಡಿದರೆ ಸಕಾಲಕ್ಕೆ ಮಳೆ, ಉತ್ತಮ ಪರಿಸರ ಕಾಣಲು ಸಾಧ್ಯ ಎಂದರು.

ಎಂ.ಬಿ. ಪಾಟೀಲ, ಬಾಬಾಸಾಹೇಬ ಕಾಗವಾಡೆ, ಚನಗೌಡ ಪಾಟೀಲ, ಗ್ರಾಪಂ ಸದಸ್ಯ ಮುರಿಗೆಪ್ಪ ಬುಲಬುಲೆ, ಮಹಾದೇವಿ ಗಸ್ತಿ , ಎಸ್.ಆರ್. ಚೌಗಲಾ, ಪ್ರಾಚಾರ್ಯ ಆರ್.ವಿ. ಕಾಂಬಳೆ, ಹಾಲಸಿದ್ದೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಜಯ ದಳವಾಯಿ, ಎ.ಎಲ್. ಶಿರಹಟ್ಟಿ, ಕವಿತಾ ಘಟಕಾಂಬಳೆ, ಎನ್.ಬಿ. ಕುಸನಾಳೆ, ರಾಜು ಕಾಂಬಳೆ, ಡಿ.ಕೆ. ಕಾಂಬಳೆ, ಎನ್.ಎಸ್. ಬಂಡಗಾರ ಇತರರಿದ್ದರು.