ಶನಿವಾರಸಂತೆ: ಸಮಿಪದ ಬ್ಯಾಡಗೊಟ್ಟ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಮಂದಿ ನೀರು ನಿರ್ವಾಹಕರಿಗೆ ಗಮ್‌ಬೂಟ್, ರೈನ್‌ಕೋಟ್, ಟಾರ್ಚ್ ಸೇರಿದಂತೆ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಅತ್ಯವಶ್ಯಕವಾಗಿರುವ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪಾವನಾ ಗಗನ್, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಕಾಂತರಾಜ್, ಸದಸ್ಯರಾದ ಹನೀಫ್, ದಿನೇಶ್ ಕುಮಾರ್ ಮತ್ತು ಪಿಡಿಒ ಗಿರೀಶ್ ಅವರು ನೀರು ನಿರ್ವಾಹಕರಿಗೆ ಪರಿಕರಗಳನ್ನು ವಿತರಿಸಿದರು. ಈ ಸಂದರ್ಭ ಗ್ರಾ.ಪಂ. ಸಿಬ್ಬಂದಿ ಇದ್ದರು.