ಜಿಲ್ಲೆ

ನೀರು ನಿರ್ವಹಣೆಗೆ ಸಮಿತಿ ರಚಿಸಲಿ

ಅಥಣಿ ಗ್ರಾಮೀಣ: ಗ್ರಾಮ ಪಂಚಾಯಿತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ರಚನೆ ಮಾಡಿ ಜೆಜೆಎಂ ಕಾಮಗಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಹೇಳಿದರು.

ಅಥಣಿ ತಾಲೂಕಿನ ಪೂರ್ವಭಾಗದ ಪಡತರವಾಡಿ, ಐಗಳಿ, ದಬದಬಹಟ್ಟಿ, ರಡ್ಡೇರಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು.

ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಮಿತಿ ಗಮನಹರಿಸಬೇಕು. ನೀರು ತಪಾಸಣೆ ಕೈಗೊಳ್ಳುವ ಜತೆಗೆ ಪ್ರತಿ ಲೀಟರ್ ನೀರಿಗೆ ದರ ನಿಗದಿಪಡಿಸಿ ದಿನದ ೨೪ ಗಂಟೆ ನೀರು ವಿತರಿಸಬೇಕು.

ವಿವಿಧ ವಿಷಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸ್ಥಳೀಯರ ಕುಂದು-ಕೊರತೆ ಆಲಿಸಿದರು. ಚಿಕ್ಕೋಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ಪಾಂಡುರಂಗ ಜೋಶಿ, ಯೋಜನಾ ವ್ಯವಸ್ಥಾಪಕ ದಿಲೀಪ್ ಕೆ., ತಾಲೂಕು ಅಧಿಕಾರಿಗಳಾದ ರವೀಂದ್ರ ಮೂರಗಾಲಿ, ಈರಣ್ಣ ವಾಲಿ, ಶಿವಾನಂದ ಕಲ್ಲಾಪುರ, ಬಸವರಾಜ ಪಾಟೀಲ, ಕಿರಣ ಮಾಳಿ, ಪಿಡಿಒಗಳಾದ ಬಸವರಾಜ ಬಳೋಜಿ, ರಾಜೇಂದ್ರ ಪಾಟಕ, ಈರಪ್ಪ ತಮದಡ್ಡಿ, ಜಿಪಂ ಮಾಜಿ ಸದಸ್ಯ ಅಪ್ಪಾಸಾಹೇಬ ಅವತಾಡೆ, ಎಲ್.ಬಿ. ಘಟನಟ್ಟಿ ಇತರರಿದ್ದರು.