ಜಿಲ್ಲೆ

ನೀರಿನಲ್ಲಿ ಮುಳುಗಿದ ದೇವಸ್ಥಾನ

ಬೀದರ್: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಕಾರಂಜಾ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರಿಂದ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಮಲ್ಲಿಕಾರ್ಜುನ ಮಂದಿರ ಜಲಾವೃತಗೊಂಡಿದ್ದು, ಕಳಸ ಮಾತ್ರ ಕಾಣುತ್ತಿದೆ.
ಕಾರಂಜಾ ಜಲಾಶಯ ಭರ್ತಿಯಾದ ಕಾರಣ ಎರಡು ಗೇಟ್ ತೆರೆದು ಐದು ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದು, ಗ್ರಾಮದ ಹಳ್ಳದ ದಂಡೆಯಲ್ಲಿರುವ ಮಂದಿರ ಪೂರ್ಣ ಮುಳುಗಿದೆ. ಕಳೆದ ವರ್ಷ ಸಹ ದೇವಸ್ಥಾನ ಜಲಾವೃತಗೊಂಡಿತ್ತು.