ಜಿಲ್ಲೆ

ನೀರಿನಲ್ಲಿ ಮುಳುಗಿ ವೃದ್ಧ ಸಾವು

ಎಂ.ರವಿ

ಹಲಗೂರು: ಮುತ್ತತ್ತಿಯ ಕಾವೇರಿ ನದಿಯಲ್ಲಿ ಮಂಗಳವಾರ ಸ್ನಾನ ಮಾಡಲು ಹೋದ ವೃದ್ಧ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಳವಳ್ಳಿ ತಾಲೂಕಿನ ಹಾಡ್ಲಿ ಸರ್ಕಲ್ ಸಮೀಪ ಇರುವ ಲಿಂಗನಪುರ ಗ್ರಾಮದ ನಿವಾಸಿ ಸಿದ್ದಯ್ಯ(85) ಮೃತಪಟ್ಟವರು. ಮುತ್ತತ್ತಿರಾಯನ ದರ್ಶನ ಪಡೆಯಲು ಬಂದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಎಸ್‌ಐ ಬಿ. ಮಹೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬುಧವಾರ ನುರಿತ ಈಜುಗಾರರು ಶವವನ್ನು ಹೊರತೆಗೆದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.