ಭಟ್ಕಳ: ತಾಲೂಕಿನ ಮುರ್ಡೆಶ್ವರದ ಕಡಲತೀರದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿದ್ದ ಐವರು ಪ್ರವಾಸಿಗರನ್ನು ಮುರ್ಡೆಶ್ವರದ ಲೈಫ್ಗಾರ್ಡ್ ಸಿಬ್ಬಂದಿ ಹಾಗೂ ಮೀನುಗಾರರು ರಕ್ಷಿಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಆಗಮಿಸಿದ್ದ ನಾಲ್ವರ ಪೈಕಿ ಅಪಾಯದಲ್ಲಿದ್ದ ಅರ್ಜುನ್ ಎಸ್.ಎ. ಹಾಗೂ ಚರಣ ಸಿ.ಎಸ್. ಅವರನ್ನು ರಕ್ಷಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ 9 ಜನರ ಪೈಕಿ ಅಪಾಯಕ್ಕೆ ಸಿಲುಕಿದ್ದ ಚಿಕ್ಕಬಳ್ಳಾಪುರದ ಸಾತ್ವಿಕ್, ಆದರ್ಶ ಹಾಗೂ ನವೀನ ಎಂಬುವವರನ್ನು ಲೈಫ್ಗಾರ್ಡ್ಗಳಾದ ಜಯರಾಮ ಹರಿಕಾಂತ, ಶಶಿಧರ ನಾಯ್ಕ, ಅಣ್ಣಪ್ಪ ಹರಿಕಾಂತ, ಮೀನುಗಾರರಾದ ಪರಶು ಹರಿಕಾಂತ, ಸಂತೋಷ ಹರಿಕಾಂತ ರಕ್ಷಿಸಿದ್ದಾರೆ.