ಜಿಲ್ಲೆ

ನೀರಿನ ಸಮಸ್ಯೆಗೆ ಸ್ಪಂದಿಸಿದ ನಾಗಮಾರಪಳ್ಳಿ

ಬೀದರ್: ನಗರದ ಮೌನೇಶ್ವರ ಮಂದಿರ ಬಳಿ ಬೋರ್ ವೆಲ್ ಕೊರೆಸುವ ಮೂಲಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕಾಲನಿ ನಿವಾಸಿಗಳ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ.

ನೀರಿನ ಸಮಸ್ಯೆ ಇರುವ ವಿಷಯವನ್ನು ಬಡಾವಣೆ ನಿವಾಸಿಗಳು ಗಮನಕ್ಕೆ ತಂದಿದ್ದರು. ಶಾಶ್ವತ ಪರಿಹಾರ ಕಲ್ಪಿಸಿಕೊಡಲು ದೇವಸ್ಥಾನದ ಬಳಿ ಕೊಳವೆ ಬಾವಿ ಕೊರೆಸಲಾಗಿದೆ ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ. ನಾಗಮಾರಪಳ್ಳಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಮುಖರಾದ ಬಾಬುರಾವ್ ವಿಶ್ವಕರ್ಮ, ಶ್ರೀಧರ ಪಾಂಚಾಳ, ಮಹೇಶ ಪಾಂಚಾಳ, ವೈಜನಾಥ ಗುಮ್ಮ, ಸಂಜು ಮೈನಳ್ಳೆ, ಶಾಂತಕುಮಾರ ಬೇಲೂರೆ, ಕಾಶೀನಾಥ ವಿಶ್ವಕರ್ಮ, ಶೈಲೇಶ (ಪಿಂಟು) ತಡಕಲ್, ನಾರಾಯಣ ಕೋಡಗಾವೆ ಇತರರಿದ್ದರು.