ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಧರ್ಮಾಬಾಯಿ, ಶಿವಕುಮಾರ ಸ್ವಾಮಿ, ರಾಜರಡ್ಡಿ ಶಾಬಾದ್, ಗುರುನಾಥ ರಾಜಗೀರಾ ಇತರರಿದ್ದರು. 
ಜಿಲ್ಲೆ

ನೀರಿನ ಸಮಸ್ಯೆ ನಿವಾರಣೆಗೆ ಜೆಜೆಎಂ ಸಹಕಾರಿ

ರಾಜು ಯಮಕನಮರಡಿ

ಬೀದರ್: ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಜಲಜೀವನ್ ಮಿಷನ್ (ಜೆಜೆಎಂ) ಜಾರಿಗೆ ತಂದಿದ್ದಾರೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮದಲ್ಲಿ ಶನಿವಾರ ಜೆಜೆಎಂ ಕಾಮಗಾರಿಗೆ ಚಾಲನೆ ನೀಡಿದ ಅವರು, ನೀರಿನ ಸಂಕಷ್ಟ ನಿವಾರಣೆಗಾಗಿ ಈ ಹಿಂದೆ ವಿವಿಧ ಯೋಜನೆಗಳು ಜಾರಿಗೆ ಬಂದಿದ್ದರೂ ಸಮರ್ಪಕ ಅನುಷ್ಠಾನವಾಗಿಲ್ಲ. ಹೀಗಾಗಿ ಕೇಂದ್ರ ಜೆಜೆಎಂ ಜಾರಿಗೆ ತಂದಿದ್ದು, ನೀರಿನ ಬವಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದರು.

ಪ್ರತಿ ಹಳ್ಳಿಗೂ ಕುಡಿವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ಜೆಜೆಎಂ ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಂದು ಮನೆಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ ಅವರು, ಕ್ಷೇತ್ರದ ಹಲವೆಡೆ ರಸ್ತೆ, ಶಾಲಾ ಕಟ್ಟಡ, ಚರಂಡಿ ಇತರ ಸಮಸ್ಯೆಗಳಿದ್ದು, ಹಂತ-ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಧರ್ಮಾಬಾಯಿ ಮಿಟ್ಟುಸಿಂಗ್, ಉಪಾಧ್ಯಕ್ಷ ಮಹ್ಮದ್ ಜಮೀರ್, ಸದಸ್ಯರಾದ ಧನರಾಜ ಪೋಶೆಟ್ಟಿ, ಮುಖಂಡರಾದ ರಾಜರಡ್ಡಿ ಶಾಬಾದ್, ಗುರುನಾಥ ರಾಜಗೀರಾ, ಘಾಳೆಪ್ಪ ಚಟ್ನಳ್ಳಿ, ಶಿವಕುಮಾರ ಸ್ವಾಮಿ ಇತರರಿದ್ದರು.