ನಿಪ್ಪಾಣಿ: ನಗರದ ನೀರಿನ ಸಮಸ್ಯೆ ನಿವಾರಣೆಗಾಗಿ ಅಗತ್ಯ ಕಾಮಗಾರಿ ಕೈಗೊಳ್ಳಲು ಅಮೃತ್&2 ಯೋಜನೆಯಡಿ 20.50 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೂರು ಓವರ್ ಹೆಡ್ ಟ್ಯಾಂಕ್, ನೀರು ಶುದ್ಧೀಕರಣ ವ್ಯವಸ್ಥೆ ಹಾಗೂ ಹೊಸ ಪೈಪ್ಲೈನ್ ಅಳವಡಿಸಲು ಶ್ರೀ ಅನುಮೋದನೆ ದೊರೆಯುವ ವಿಶ್ವಾಸ ಇದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮತ್ತು ಅಧಿಕಾರಿಗಳು ಹಾಗೂ ಜೈನ್ ನೀರಾವರಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40 ಹಾಗೂ ನಗರಸಭೆ ಶೇ.10 ಅನುದಾನ ನೀಡಲಿದೆ. ದೇವಚಂದ್ ಕಾಲೇಜು ಬಳಿಯ ಬಾಳುಮಾಮಾ ಪಾರ್ಕ್ನಲ್ಲಿ 10 ಲ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು 5 ಲ ಲೀಟರ್ ಸಾಮರ್ಥ್ಯದ ಎಪಿಎಂಸಿ ಬಳಿ ಟ್ಯಾಂಕ್ ಮತ್ತು ಎಂಬಿಆರ್ ಟ್ಯಾಂಕ್ ಬಳಿ 10 ಲ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸ್ಥಾಪಿಸಲಾಗುವುದು ಎಂದರು.
ನಗರದಲ್ಲಿನ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ವಿವರ ತಿಳಿಯಲು ಗಣಕಯಂತ್ರ ಅಳವಡಿಸಲಾಗುವುದು. ಜವಾಹರ ಕೆರೆ ಕೆಸರು ತೆಗೆಯಲು ಶ್ರಮಿಸಲಾಗುವುದು. ವೇದಗಂಗಾ ನದಿಯಿಂದ ಜವಾಹರ ಕೆರೆವರೆಗೆ ಮತ್ತೆ 3 ಅಡಿ ಪೆಪ್ಲೆನ್ ಹಾಕಿ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ದೂಧಗಂಗಾ ನದಿಯಿಂದಲೂ ನಗರಕ್ಕೆ ನೀರು ಪೂರೈಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯ ಜಯವಂತ ಭಾಟಲೆ, ರಾಜು ಗುಂದೇಶಾ, ಮಾಜಿ ಉಪಾಧ್ಯ ಸುನೀಲ ಪಾಟೀಲ, ನೀತಾ ಬಾಗಡೆ, ಸದಸ್ಯರು ಉಪಸ್ಥಿತರಿದ್ದರು.