ಜಿಲ್ಲೆ

ನೀರಿನ ರಭಸಕ್ಕೆ ವ್ಯಕ್ತಿಯೊಬ್ಬ ಮೃತ

ಬಳ್ಳಾರಿ : ತಾಲೂಕಿನ ಶಂಕರಬಂಡೆ ಗ್ರಾಮದ ಬಳಿಯ ತುಂಬಿ ಹರಿಯತ್ತಿರುವ ಹಳ್ಳದ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿ, ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತಾಲೂಕಿನ ವಿೇಶ್ವರ ಕ್ಯಾಂಪ್ ನಿವಾಸಿ ಶಿವು (37) ಮೃತ. ತಡರಾತ್ರಿ ಸುರಿಯುತ್ತಿರುವ ಮಳೆಯಲ್ಲಿ ತುಂಬಿದ ಹಳ್ಳದ ಮೇಲೆ ಕಾರು ಚಲಾಯಿಸಲು ಯತ್ನಿಸಿದ್ದಾನೆ. ನೀರಿನ ರಭಸಕ್ಕೆ ಕಾರು ಹಳ್ಳದಲ್ಲಿ ಕೊಚ್ಚಿ ಹೋಗುವ ವೇಳೆ, ಕಾರಿನಿಂದ ಜಿಗಿದು ಮರದ ಮೇಲೆ ಕುಳಿತಿದ್ದಾನೆ. ಬೆಳಗ್ಗೆ ನೀರು ತಗ್ಗಿದ ಬಳಿಕ ಚಿಕಿತ್ಸೆಗೆಂದು ಆಸ್ಪತ್ರೆ ಸಾಗಿಸುವ ರಸ್ತೆ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.