ಚಿತ್ರದುರ್ಗ: ಪರಿಸರ ಸಂರಕ್ಷಣೆ, ಗಿಡ-ಮರಗಳ ಪೋಷಣೆಯಿಂದ ತಾಪಮಾನ ನಿಯಂತ್ರಿಸಬಹುದಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಕುಡಿಯುವ ನೀರಿನ ಅರವಟಿಕೆಗೆ ಚಾಲನೆ ನೀಡಿ ಮಾತನಾಡಿ, ಬಿಸಿಲಿನ ತೀವ್ರತೆ ಅಧಿಕವಾಗಿದೆ. ಸದ್ಯ ನಗರದಲ್ಲಿ ಎರಡು ಕಡೆ ಅರವಟಿಕೆ ಆರಂಭಿಸಲಾಗಿದೆ ಎಂದರು.
ನೀರಿನ ಲಭ್ಯತೆ ಆಧರಿಸಿ ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರವಟಿಗೆ ಆರಂಭಿಸುವ ಯೋಜನೆ ಇದೆ. ಪಶು-ಪಕ್ಷಿಗಳಿಗೂ ವಿಶೇಷ ಅರವಟಿಕೆ ವ್ಯವಸ್ಥೆ ಮಾಡಲಾಗುವುದು. ಮಣ್ಣಿನ ಮಡಿಕೆಗಳಲ್ಲಿ ನಿತ್ಯ ಕುಡಿವ ನೀರನ್ನು ಒದಗಿಸಲಾಗುತ್ತದೆ. ಜೀವಜಲ ನೀರಿನ ಒಂದು ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಕುಡಾ ಮಾಜಿ ಅಧ್ಯಕ್ಷ ಬದ್ರಿನಾಥ್, ಅರುಣ್, ನಾಗರಾಜ ಬೇದ್ರೆ ಮತ್ತಿತರರು ಇದ್ದರು.