ಜಿಲ್ಲೆ

ನೀರಿನ ಪರಿಕರಗಳನ್ನು ಮುಚ್ಚಿರಿ

ಬಳ್ಳಾರಿ : ಬಳಕೆಗಾಗಿ ನೀರು ತುಂಬುವ ಪರಿಕರಗಳಿಗೆ ಸರಿಯಾಗಿ ಮುಚ್ಚಿ ಅಥವಾ ಬಟ್ಟೆ ಹೊದಿಸುವ ಮೂಲಕ ಡೆಂೆ ಹರಡುವುದನ್ನು ತಡೆಯಬಹುದು ಎಂದು ಡಿಎಚ್‌ಒ ಡಾ.ವೈ. ರಮೇಶಬಾಬು ಹೇಳಿದರು.
ನಗರದ ಮರಿಸ್ವಾಮಿ ಮಠದ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಿರ್ಮೂಲನಾ ದಿನದ ಅಂಗವಾಗಿ ನಡೆದ ಮನೆ, ಶಾಲೆ, ಅಂಗನವಾಡಿಗಳು, ವಾಣಿಜ್ಯ ಮಳಿಗೆಗಳಲ್ಲಿ ನೀರು ಸಂಗ್ರಹಕಗಳನ್ನು ಪರಿಶೀಲಿಸಿ ಮಾತನಾಡಿದರು. ಜನರು ಡ್ರಮ್‌ಗಳಿಗೆ ಬಟ್ಟೆ ಕಟ್ಟುವ ರೂಡಿ ಆರಂಭಿಸಿರುವುದು ಎಲ್ಲರಿಗೂ ಮಾದರಿಯಾಗಲಿದೆ. ನೀರು ಸಂಗ್ರಹಕಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿದ ನಂತರ ಮುಚ್ಚಳ ಮುಚ್ಚಿ, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಆರ್. ಅಬ್ದುಲ್ಲಾ ಮಾತನಾಡಿ, ಡೆಂೆಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಲಕ್ಷಣಗಳಾಧರಿಸಿ ಚಿಕಿತ್ಸೆ ನೀಡಲಾಗುವುದು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಲಭ್ಯವಿದೆ, ಮುಖ್ಯವಾಗಿ ಸಾರ್ವಜನಿಕರು ಮನೆಯಲ್ಲಿ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದರು.
ಆರೋಗ್ಯ ಸಿಬ್ಬಂದಿ ಮರಿಬಸಗೌಡ, ಬಾಬುರಾವ್, ಶಕುಂತಲಾ ಮ್ಯಾಳಿ, ನಂದಿನಿ, ಅಂಬುಜಾ, ನಾಗರಾಜ, ಮಾಹಾಂಕಾಳಿ, ಸುಧಾ, ಹನುಮಂತಮ್ಮ, ಪುಷ್ಪಲತಾ, ಮಂಜಮ್ಮ, ಬಸವರಾಜ, ಸೋಮಶೇಖರ, ಗಂಗಾಧರ, ಬಸವರಾಜ ಇದ್ದರು.