ಚಿತ್ರದುರ್ಗ: ಶುದ್ಧ ಕುಡಿವ ನೀರಿನ ದರ ಏರಿಸಿರುವ ಖಾಸಗಿ ಶುದ್ಧ ನೀರಿನ ಘಟಕಗಳ ಮಾಲೀಕರ ನಿರ್ಧಾರವನ್ನು ವಿರೋಧಿಸಿ ಜೈ ಹಿಂದ್ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. 20 ಲೀಟರ್ ಶುದ್ಧ ನೀರಿಗೆ ಈ ಮೊದಲು ಇದ್ದ 5 ರೂ.ಗಳನ್ನು ಈಗ 10 ರೂ.ಗೆ ಹೆಚ್ಚಿಸಲಾಗಿದೆ ಎಂದು ದೂರಿದರು. ವೇದಿಕೆ ಜಿಲ್ಲಾಧ್ಯಕ್ಷ ಸೈಯದ್ ಅಖ್ತರ್, ಚಂದ್ರಪ್ಪ, ರಹಮತ್, ಜಬೀವುಲ್ಲಾ, ಬರ್ಕತ್,ಮುಹೀಬ್ ಇದ್ದರು.