ಜಿಲ್ಲೆ

ನೀರಿನ ಟ್ಯಾಂಕರ್ ಪಲ್ಟಿ; ಓರ್ವ ಸಾವು, ಮತ್ತೊಬ್ಬರಿಗೆ ಗಾಯ

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ನೀರಿನ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಕಾರ್ಮಿಕ ಸಾವನ್ನಪ್ಪಿ, ಮತ್ತೊಬ್ಬರ ಕಾಲು ತುಂಡಾಗಿರುವ ಘಟನೆ ಹಾಸನ ನಗರದ ಹೊರವಲಯದ ಬೂವನಹಳ್ಳಿ ಬೈಪಾಸ್ ಬಳಿ ಗುರುವಾರ ನಡೆದಿದೆ.

ರಾಯಚೂರು ಜಿಲ್ಲೆ, ಗೂನುವಾರಹಳ್ಳಿ ಗ್ರಾಮದ ನಿವಾಸಿ ಅಯ್ಯಪ್ಪ (22) ಮೃತ ಯುವಕ. ಇದೇ ಗ್ರಾಮದ ದೇವರಾಜ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಬ್ಬರು ಕಾರ್ಮಿಕರು ಹೆದ್ದಾರಿ ಕೆಲಸ ಮಾಡುತ್ತಿದ್ದ ವೇಳೆ ಕ್ಯೂರಿಂಗ್ ಮಾಡಲು ನೀರು ಸರಬರಾಜು ಮಾಡಲು ಬಂದ ವಾಟರ್ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಯ್ಯಪ್ಪ ಹಾಗೂ ದೇವರಾಜ್ ಮೇಲೆ ಬಿದ್ದಿದೆ. ಅಯ್ಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ದೇವರಾಜ ಅವರ ಕಾಲು ತುಂಡಾಗಿ ಗಂಭೀರ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.