ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರಿಗೆ ತಹಸೀಲ್ದಾರ್ ಶಿವಾನಂದ ಮೇತ್ರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಪಿಡಿಒ ಬಸವರಾಜ ರೋಗಿ, ಸುನೀಲ, ಪರಪ್ಪ, ಸಹದೇವ ಸ್ವಾಮಿ ಇದ್ದರು. 
ಜಿಲ್ಲೆ

ನೀರಿಗಾಗಿ ಮಹಿಳೆಯರಿಂದ ಗ್ರಾಪಂ ಮುತ್ತಿಗೆ

ರಾಜು ಯಮಕನಮರಡಿ

ಹುಲಸೂರು: ಬೇಸಿಗೆ ಪ್ರಾರಂಭವಾಗಿದ್ದರೂ ಸಹ ನಮ್ಮ ಬಡಾವಣೆಗೆ ಕುಡಿಯುವ ನೀರು ಬರುತ್ತಿಲ್ಲ ಎಂದು ಮಹಿಳೆಯರು ಗುರುವಾರ ಬೇಲೂರು ಗ್ರಾಪಂಗೆ ಮುತ್ತಿಗೆ ಹಾಕಿದರು.

ಬಸವಕಲ್ಯಾಣ-ಹುಲಸೂರು ರಸ್ತೆಯ ವಾರ್ಡ್ ನಂ.೨ರ ಬಡಾವಣೆಗಳಿಗೆ ಕಳೆದ ಕೆಲ ದಿನಗಳ ಹಿಂದೆ ಹೊಸ ಕೊಳವೆ ಬಾವಿ ಕೊರೆಯಲಾಗಿದ್ದರೂ ನೀರು ಸರಬುರಾಜು ಮಾಡಲು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಕಿಡಿಗೇಡಿಗಳು ಕೊಳವೆ ಬಾವಿಯ ತಂತಿ ಕಳ್ಳತನ ಮಾಡಿದ್ದರಿಂದ ಸಮಸ್ಯೆಗೆ ಕಾರಣವಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆ ನಿವಾಸಿಗಳಾದ ಜ್ಯೋತಿ ಸ್ವಾಮಿ, ತ್ರಿವೇಣಿ ಶಾಂತಯ್ಯ, ಚೆನ್ನಮ್ಮ, ಸಂತೋಷಿ ಹುಲೆಪ್ಪ, ಶಿವಲೀಲಾ ವಕಾರೆ, ಶರಣಮ್ಮ ವಕಾರೆ ಸಹದೇವ ಸ್ವಾಮಿ ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಶಿವಾನಂದ ಮೇತ್ರೆ ಗ್ರಾಮಕ್ಕೆ ಭೇಟಿ ನೀಡಿ ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳದಲ್ಲಿದ್ದ ಪಿಡಿಒ ಬಸವರಾಜ ರೋಗಿ ಅವರಿಗೆ ತಾಕೀತು ಮಾಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಪ್ರಮುಖರಾದ ಸುನೀಲ ಪರಪ್ಪ. ಸಹದೇವ ಇತರರಿದ್ದರು.