ಕೊಡೇಕಲ್: ನಿರಂತರ ಒಳಹರಿವಿನಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿರುವುದು ಕೃಷ್ಣಾ ಅಚ್ಚುಕಟ್ಟು ಪ್ರದೇಶ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಹಿಂಗಾರು ಬೆಳೆಗಳಿಗೆ ವಾರಾಬಂದಿ ಪದ್ಧತಿ ಇಲ್ಲದೆ ನೀರು ಹರಿಸುವ ಅವಧಿ ನಿರ್ಧರಿಸುವ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯತ್ತ ಚಿತ್ತ ನೆಟ್ಟಿದೆ.
ಹೌದು, ಕಳೆದ ವರ್ಷ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದ್ದರಿAದ ಹಿಂಗಾರು ಬೆಳೆಗಳಿಗೆ ನೀರು ಸಿಗದೆ ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಆದರೀಗ ಮಹಾರಾಷ್ಟç ಸೇರಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳು ತುಂಬಿಕೊAಡಿವೆ. ಅದರಲ್ಲೂ ಅಣೆಕಟ್ಟು ಹಿನ್ನೀರ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ಬಸವಸಾಗರಕ್ಕೆ ಒಳಹರಿವು ಇರುವುದು ಹಿಂಗಾರು ಬೆಳೆಗಳಿಗೆ ವಾರಾಬಂದಿರಹಿತ ನೀರು ಹರಿಸುವ ಆಶಾಭಾವ ಮೂಡಿಸಿದೆ.
ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಭತ್ತ ಮಳೆ ಮತ್ತು ಕಾಲುವೆ ನೀರಿನ ಸಹಾಯದಿಂದ ಸಮೃದ್ಧವಾಗಿ ಬೆಳೆದಿದ್ದು, ಮುಂದಿನ ತಿಂಗಳು ಕಟಾವಿಗೆ ಬರಲಿದೆ. ಆದರೀಗ ಹಿಂಗಾರಿಗೆ ಎಂದಿನಿAದ ಎಲ್ಲಿವರೆಗೆ ಕಾಲುವೆಗೆ ನೀರು ಹರಿಯಲಿದೆ ಎಂಬ ತೀರ್ಮಾನ ಐಸಿಸಿ ಕೈಗೊಂಡ ಬಳಿಕ ರೈತರು ಭತ್ತ ಸಸಿ ನಾಟಲು ಮುಂದಾಗಲಿದ್ದಾರೆ.
ಇನ್ನು ಕೃಷ್ಣಾ ಅಚ್ಚುಕಟ್ಟು ರೈತರು ಕಾಲುವೆ ನೀರು ನಂಬಿಯೇ ಬಡವರ ಬಾದಾಮಿ ಖ್ಯಾತಿಯ ವಾಣಿಜ್ಯ ಬೆಳೆ ಶೇಂಗಾ 1600-1700 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದು, ಇಳುವರಿ ಬರಲು ಕನಿಷ್ಠ ಆರು ತಿಂಗಳು ಬೇಕು. ಏಪ್ರಿಲ್ ಕೊನೆಯವರೆಗೆ ಕಾಲುವೆಗೆ ನೀರು ಹರಿದರೆ ಮಾತ್ರ ಇಳುವರಿ ಕೈ ಸೇರಲಿದೆ. ಹೀಗಾಗಿ ಐಸಿಸಿ ಕೂಡಲೇ ಸಭೆ ಕರೆದು ನಿರ್ಧಾರ ಪ್ರಕಟಿಸಬೇಕು ಎಂಬುದು ರೈತ ಸಂಘಟನೆಗಳು ಮತ್ತು ಅನ್ನದಾತರ ಒತ್ತಾಸೆಯಾಗಿದೆ.