ಜಿಲ್ಲೆ

ನೀರಾವರಿ, ಕುಡಿಯುವ ನೀರಿಗೆ ಆದ್ಯತೆ : ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ, ಮಾಲೂರಿನಲ್ಲಿ ಜನತಾ ಜಲಧಾರೆಗೆ ಚಾಲನೆ

ಮಾಲೂರು: ಜಾತ್ಯತಿತ ಜನತಾದಳವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೃಷಿಗೆ ಹಾಗೂ ಕುಡಿಯಲು ಶುದ್ಧ ನೀರು ಒದಗಿಸಲಾಗುವುದು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣ ಹೊರವಲಯದ ವೈಟ್​ಗಾರ್ಡನ್​ನಲ್ಲಿ ಗುರುವಾರ ಆಯೋಜಿಸಿದ್ದ ಜನತಾ ಜಲಧಾರೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 5 ವರ್ಷದಲ್ಲಿ ಎಲ್ಲ ಯೋಜನೆಗಳನ್ನೂ ಪೂರ್ಣಗೊಳಿಸುತ್ತೇವೆ. ಕಾಂಗ್ರೆಸ್​ ಮತ್ತು ಬಿಜೆಪಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮನಸ್ಸು ಮಾಡಲಿಲ್ಲ. ಈಗಿನ ಸರ್ಕಾರ ಕೇವಲ 8 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಯರಗೋಳ್​ ಡ್ಯಾಂ ನಿಮಾರ್ಣಕ್ಕೆ 2006&-07ರಲ್ಲಿ ನಾನು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿದೆ. ಪ್ರಸ್ತುತ ಡ್ಯಾಂ ನಿಮಾರ್ಣ ಮುಗಿದಿದ್ದರೂ, ಇಲ್ಲಿರುವ ಜನಪ್ರತಿನಿಧಿಗಳಿಂದ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದರು.

ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಲೂರಿನಲ್ಲಿ ದ್ಯಾವಿರಪ್ಪನವರ ಕಾಲದಿಂದ ನಾಯಕರ ಸಂಪರ್ಕವಿದ್ದು, ಜೆಡಿಎಸ್​ ಅಭ್ಯರ್ಥಿಯಾಗಲಿರುವ ರಾಮೇಗೌಡ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದರು.

ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ರಾಮೇಗೌಡ ಮಾತನಾಡಿ, ಕ್ಷೇತ್ರದ ಜನಪ್ರತಿನಿಧಿಗಳಿಗೆ ರೈತ, ಜನಪರ ಕಾಳಜಿಯಿಲ್ಲ ಎಂದು ಗುಡುಗಿದ    ರು.

ಜನತಾ ಜಲಧಾರೆ ಯಾತ್ರೆ ಆಲಂಬಾಡಿ, ಜಯಮಂಗಲ ಮಾರ್ಗವಾಗಿ ಮಾಲೂರು ತಲುಪುತ್ತಿದ್ದಂತೆ ಸುಮಂಗಲಿಯರು ಪೂರ್ಣಕುಂಭ ಸ್ವಾಗತ ನೀಡಿದರು.

ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ ಜಿ.ಕೆ.ಕೃಷ್ಣಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ಒಕ್ಕಲಿಗರ ಸಂಘದ ಸದಸ್ಯರಾದ ವಕ್ಕಲೇರಿ ರಾಮು, ಡಾ.ರಮೇಶ್​, ತಾಲೂಕು ಅಧ್ಯಕ್ಷ ಚಂದ್ರಶೇಖರಗೌಡ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ, ಕಾರ್ಯದರ್ಶಿ ರಾಮಸ್ವಾಮಿ ರೆಡ್ಡಿ, ಉಪಾಧ್ಯಕ್ಷ ದಿನೇಶ್​ಗೌಡ, ನಗರಾಧ್ಯಕ್ಷ ಎಂ.ಕೆ.ಆನಂದಕುಮಾರ್​ ಇತರರಿದ್ದರು.

ರಾಜ್ಯದಲ್ಲಿ ಮೊದಲ ಬಾರಿಗೆ ಎಸ್ಟಿ, ಮುಸ್ಲಿಮರಿಗೆ ನಾನು 1994ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಮೀಸಲಾತಿ ದೊರಕಿಸಿಕೊಟ್ಟಿದ್ದೆ. ಕೃಷ್ಣಾ, ಕಾವೇರಿ ಸೇರಿ ಹಲವಾರು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಯಾವಾಗಲೂ ರೈತ, ಮಹಿಳೆ, ಶೋಷಿತರ ಪರ ನಿಂತಿದ್ದೇವೆ. ಆದರೂ ಜನ ನಮಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡುತ್ತಿಲ್ಲ ಏಕೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಪ್ರಶ್ನಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರೂ ಕುಮಾರಸ್ವಾಮಿ ಮತ್ತು ನನ್ನನ್ನು ಮುಗಿಸಲು ಕೆಲವರು ಕಾಯುತ್ತಿದ್ದಾರೆ. ಆದರೆ ಜನರೇ ನಮ್ಮನ್ನು ಪ್ರತಿ ಸಾರಿ ಕೈಬಿಡದೆ ಕಾಯುತ್ತಿದ್ದಾರೆ ಎಂದರು.

ಬಿಜೆಪಿ ಧರ್ಮದ ಹೆಸರಲ್ಲಿ ಹಿಂದು -ಮುಸ್ಲಿಮರನ್ನು ಒಡೆಯುತ್ತಿದೆ. ಮುಸ್ಲಿಮರು ಮಾವು, ಹುಣಸೆ ಕೊಂಡು ರೈತರಿಗೆ ಸಹಾಯ ಮಾಡುತ್ತಿದ್ದಾರೆ. 2018ರಲ್ಲಿ ಮಾವಿಗೆ ಬೆಲೆ ಕುಸಿದಾಗ ಬೆಂಬಲ ಬೆಲೆ ನೀಡಿದ್ದೆ. ನಾವು ಅಧಿಕಾರಕ್ಕೆ ಬಂದರೆ ಶೇ.40 ಕಮಿಷನ್​ ಹೊಡೆಯೋಲ್ಲ. ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ, ರೈತರನ್ನು ಸ್ವಾವಲಂಬಿಯನ್ನಾಗಿಸಲು ಪಂಚರತ್ನ ಕಾರ್ಯಕ್ರಮ ಜಾರಿಗೊಳಿಸುತ್ತೇವೆ. ಕುಮಾರಸ್ವಾಮಿ, ಮಾಜಿ ಸಿಎಂ