ಜಿಲ್ಲೆ

ನೀರಾವರಿ ಇಲಾಖೆ ಕಚೇರಿ ಚರಾಸ್ತಿ ಜಪ್ತಿ!

ಗದಗ: ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ 35 ವರ್ಷ ಕಳೆದರೂ ಗುತ್ತಿಗೆದಾರರಿಗೆ ಸಂಪೂರ್ಣ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ, ಸ್ಥಳೀಯ ಹಿರಿಯ ದಿವಾಣಿ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಜಿಲ್ಲಾಡಳಿತ ಭವನದಲ್ಲಿರುವ ಸಣ್ಣ ನೀರಾವರಿ ಕಚೇರಿ ವಸ್ತುಗಳನ್ನು ಮಂಗಳವಾರ ಜಪ್ತಿ ಮಾಡಲಾಯಿತು.

ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿರುವ ಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯು ಹುಬ್ಬಳ್ಳಿ ಗುತ್ತಿಗೆದಾರ ಆರ್.ಎನ್. ನಾಯಕ ಅವರಿಗೆ ಬಿಲ್ ಪಾವತಿಸಬೇಕಿತ್ತು. ಆದರೆ, ಈವರೆಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ, ನ್ಯಾಯಾಲಯದ ಆದೇಶ ಪ್ರಕಾರ ಸಣ್ಣ ನೀರಾವರಿ ಇಲಾಖೆಯ 6 ಕಂಪ್ಯೂಟರ್, ಟೇಬಲ್, ಕುರ್ಚಿಗಳು, ಕಪಾಟು ಮತ್ತಿತರರ ವಸ್ತುಗಳನ್ನು ಗುತ್ತಿಗೆದಾರರ ವಕೀಲರ ಎಸ್.ಆರ್. ಶಾಂತಗರಿ ಅವರ ಸಮ್ಮುಖದಲ್ಲಿ ಜಿಪ್ತಿ ಮಾಡಲಾಯಿತು.

1994 ರಲ್ಲಿ ನ್ಯಾಯಾಲಯ ಗುತ್ತಿಗೆದಾರರನಿಗೆ ಅಸಲು ಬಡ್ಡಿ ಸೇರಿ 1 ಕೋಟಿ 35 ಲಕ್ಷ ರೂಪಾಯಿ ನೀಡುವಂತೆ ಆದೇಶ ಮಾಡಿತ್ತು. ಆದರೂ, ಇಲಾಖೆ ಈವರೆಗೂ ಗುತ್ತಿಗೆದಾರರಿಗೆ ಸಂಪೂರ್ಣ ಹಣ ನೀಡಿಲ್ಲ, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಚೇರಿಯ ಚರಾಸ್ತಿ ಮಾಡಲು ಆದೇಶಿಸಿತ್ತು.

ಕೆರೆ ಕಾಮಗಾರಿ ಮಾಡಿದ ಬಿಲ್ ಪಾವತಿ ಮಾಡದ್ದರಿಂದ ನ್ಯಾಯಾಲಯ ಅಸಲು ಬಡ್ಡಿ ಸೇರಿ 2 ಕೋಟಿ 88 ಲಕ್ಷ 99 ಸಾವಿರ ರೂ., ನೀಡಬೇಕೆಂದು ಆದೇಶ ನೀಡಿದೆ. ಈ ಕುರಿತು ವಕೀಲರಿಗೆ ಸಂಪೂರ್ಣ ಮಾಹಿತಿ ಇದೆ. ನಮ್ಮ ತಂದೆಯವರಾದ ಆರ್.ಎನ್. ನಾಯಕ ಅವರು ಈ ಕಾಮಗಾರಿ ಮಾಡಿದ್ದರು. |ರಮಾನಾಥ ನಾಯಕ, ಗುತ್ತಿಗೆದಾರರ ಪುತ್ರ