ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಮಾರೆಮ್ಮ ಗುಡಿ ಗುಡ್ಡದಲ್ಲಿ ಕಳೆದ 2-3 ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಹೊಲದಲ್ಲಿ ಚಿರತೆ ಹೆಜ್ಜೆ ನೋಡಿ ಜನರು ಭಯ ಭೀತರಾಗಿದ್ದಾರೆ.
ನೀರಮಾನ್ವಿ ಗುಡ್ಡದಲ್ಲಿ ಕಳೆದ ವರ್ಷ ಜನವರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಅಲ್ಲಲ್ಲಿ ಬೋನ್‌ಗಳನ್ನು ಅಳವಡಿಸಿದ್ದಾರೆ. ಒಂದು ದೊಡ್ಡ ಚಿರತೆ ಬೋನಿಗೆ ಬಿದ್ದರೆ, ಮರಿ ಚಿರತೆಯನ್ನು ಬಲೆ ಹಾಕಿ ಹಿಡಿಯಲಾಗಿತ್ತು. ಚಿರತೆ ಮರಿ ಮತ್ತು ಇನ್ನೊಂದು ದೊಡ್ಡ ಚಿರತೆ ತಪ್ಪಿಸಿಕೊಂಡಿದ್ದವು. ಮತ್ತೆ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಇದನ್ನೂ ಓದಿ: ಮುಂಡಗೋಡ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ
ಗುಡ್ಡದಲ್ಲಿನ 8-9 ನಾಯಿಗಳಿದ್ದು ,ಅದರಲ್ಲಿ 4 ನಾಯಿಗಳನ್ನು ಚಿರತೆ ತಿಂದಿದೆ. ಜಲ್ಲಿ ಆಂಜನೇಯ್ಯ ಪೂಜಾರಿ ಹೊಲದಲ್ಲಿ ಚಿರತೆ ನಾಯಿ ಹಿಡಿದು ಎಳೆದುಕೊಂಡು ಹೋದ ಹೆಜ್ಜೆ ಗುರುತು ಮೂಡಿದೆ. ಗುಡ್ಡದಲ್ಲಿ ಆಗಾಗ ಕಾಣಿಸಿಕೊಳ್ಳುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅದಷ್ಟು ಬೇಗ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯು ಉಪವಲಯ ಅಧಿಕಾರಿ ಬೂದೆಪ್ಪ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಛಾಯಗ್ರಾಹಕ ಜಗನ್ನಾಥ ಚೌದರಿ, ಗ್ರಾಮದ ರೈತರಾದ ರಾಮನಗೌಡ, ಜಲ್ಲಿ ಕೊರವಯ್ಯ, ಹನುಮೇಶ, ಮಹೇಶ ಇದ್ದರು.