ಹಿರಿಯೂರು: ಅಮೂಲ್ಯ ನಿಸರ್ಗದತ್ತ ಸಂಪನ್ಮೂಲ ನೀರನ್ನು ಮಿತವಾಗಿ ಬಳಸಿ-ಉಳಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.
ನಗರದ 14ನೇ ವಾರ್ಡ್-ಕುಂಬಾರ ಬೀದಿಯಲ್ಲಿ ಸಂಸ್ಥೆ ವತಿಯಿಂದ ಶುದ್ಧ-ಗಂಗಾ ಕುಡಿವ ನೀರಿನ ಘಟಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ರಾಜ್ಯದ ವಿವಿಧೆಡೆ 459 ಶುದ್ಧ-ಗಂಗಾ ಕುಡಿವ ನೀರಿನ ಘಟಕ ಸ್ಥಾಪಿಸಿದ್ದು, ಜೀವಜಲ ಮಿತ ಬಳಕೆಯತ್ತ ಎಲ್ಲರೂ ಚಿತ್ತ ಹರಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್, ಮಾಜಿ ಅಧ್ಯಕ್ಷೆ ಗೀತಾ, ಸದಸ್ಯ ಜಗದೀಶ್, ಶಿರಸ್ತೇದಾರ್ ತಿಪ್ಪೇಸ್ವಾಮಿ, ವಿನಯ್‌ಕುಮಾರ್, ರಘು, ಸತೀಶ್, ಕೃಷ್ಣಮೂರ್ತಿ ಇತರರಿದ್ದರು.