ಚಿತ್ರದುರ್ಗ: ಸಂಸದರಾಗಿ ಆಯ್ಕೆಯಾದ ಬಳಿಕ ಗೋವಿಂದ ಎಂ.ಕಾರಜೋಳ ಅವರು ಪ್ರಥಮ ಬಾರಿಗೆ ಜಿಪಂದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗ ಳ ಸಭೆ ನಡೆಸಿದರು.
ಲೋಕಸಭೆ ಚುನಾವಣೆ ನೀತಿಸಂಹಿತೆ ಗುಂಗಿನಲ್ಲಿದ್ದ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದ ಸಂಸದರು, ಇದೊಂದು ಪರಿಚಯಾತ್ಮಕ ಸಭೆ, ಹಾಗಾಗಿ ಸಂಕ್ಷಿಪ್ತವಾಗಿ ನಡೆಸಿದ್ದೇನೆ ಎಂದರು.
ಮುಂದಿನ ಸಭೆಗಳು ಬೆಳಗ್ಗೆಯಿಂದ ಸಂಜೆವರೆಗೂ ನಡೆಯಲಿದ್ದು, ವಿಸ್ತೃತ ಮಾಹಿತಿಗಳೊಂದಿಗೆ ಹಾಜರಿರಬೇಕೆಂದು ಹೇಳಿದರು.
ತುರ್ತು ಸಂದರ್ಭ ಹೊರತು ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದು ಹಾಜರಿರಬೇಕು, ಸಹಾಯಕರನ್ನು ಕಳಿಸುವುದು ಸಲ್ಲದೆಂದು ಡಿಸಿ ಟಿ.ವೆಂಕಟೇಶ್‌ಗೆ ಸೂಚಿಸಿದರು.
ಬಂಡಿಯ 2 ಚಕ್ರಗಳಂತೆ, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮ ಕೆಲಸ ಮಾಡೋಣವೆಂದರು.
ಕುಡಿವ ನೀರಿನ ಸಮಸ್ಯೆ ಕುರಿತಂತೆ ಪ್ರಸ್ತಾಪಿಸಿದ ಸಂಸದರು,ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಮಾಡುತ್ತೇನೆ. ಆರೋಗ್ಯ ಇಲಾಖೆಯಂತೆ,ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಆರ್‌ಡಿಪಿಆರ್ ಕೂಡ ಪ್ರ ಮುಖ ಪಾತ್ರ ವಹಿಸುತ್ತದೆ.
ನಗರದ ಜೆಸಿಆರ್‌ನಲ್ಲಿರುವ ನನ್ನ ಬಾಡಿಗೆ ಮನೆಗೆ ಪೂರೈಕೆಯಾಗುವ ನೀರು ಕೆಸರಿಂದ ಕೂಡಿರುತ್ತದೆ. ಜನರು,ಹಾಸ್ಟೆಲ್,ಶಾಲಾ-ಕಾಲೇಜು ವಿ ದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು ಪೂರೈಸಬೇಕೆಂದು ಸೂಚಿಸಿದರು. ನಾನು ಶಾಸಕನಾಗಿದ್ದಾಗ ಮುಧೋಳ ತಾಲೂಕು ಹಲಗೇರಿ ಗ್ರಾಮದ ನೀರಿನ ಸಮಸ್ಯೆಬಗೆಹರಿಸಿದ್ದೇನೆ. ಪ್ರತಿ ಮನೆಗೆ ನಲ್ಲಿ ಸಂಪರ್ಕ ಕೊಟ್ಟು ಮೀಟರ್ ಅಳವಡಿಸಲಾಗಿತ್ತು.
ಕೇಂದ್ರ ತಂಡ ಅಧ್ಯಯನ ನಡೆಸಿದ ಬಳಿಕ ದೇಶಾದ್ಯಂತ ಜೆಜೆಎಂ ಅನುಷ್ಠಾನವಾಯಿತು. ಜೆಜೆಎಂಯಡಿ ಜನರಿಗೆ ಶುದ್ಧ ಕುಡಿವ ನೀರು ಒದಗಿ ಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಚಿತ್ರದುರ್ಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಸಮರ್ಪಕ ಅನುಷ್ಠಾನಕ್ಕಾಗಿ ಬೆಳಗಾವಿಗೆ ಅಧಿಕಾರಿಗಳನ್ನು ಕಳಿಸಿ ಎಂದು ಸಿಇಒ ಎಸ್.ಜೆ.ಸೋಮಶೇಖರ್ ಅವರಿಗೆ ಸೂಚಿಸಿದರು. ಶಾಸಕರ ಅಧ್ಯಕ್ಷತೆಯಲ್ಲಿ,ವಸತಿ ಮತ್ತಿತರ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು,ಶಾಸಕರು ಸ್ಪಂದಿಸದಿದ್ದರೆ,ಡಿಸಿ ಗಮನಕ್ಕೆ ತಂದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದರು.
ಚಿತ್ರದುರ್ಗದಲ್ಲಿ ಯುಜಿಡಿ ಸಮಸ್ಯೆ ಇದೆ ಎಂದು ಅಧಿಕಾರಿಗಳು ವಿವರಿಸಿದರು. ಬಿತ್ತನೆ ಬೀಜ,ರಸಗೊಬ್ಬರ ಕೊರತೆ ಇಲ್ಲವೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದರು. ಜಿಲ್ಲೆಯಲ್ಲಿ ವಾಡಿಗಿಂತ ಅಧಿಕ ಮಳೆಯಾಗಿದ್ದರೂ,ಹೊಳಲ್ಕೆರೆ ತಾಲೂಕಿನ 2 ಗ್ರಾಪಂಗಳಲ್ಲಿ ಮಳೆ ಕುಂಟಿತವಾಗಿದೆ. ಸಬ್ಸಿಡಿಯಲ್ಲಿ ಕೃಷಿ ಉಪಕರಣಗಳ ಖರೀದಿಗೆ ಅಂದಾಜು 25 ಕೋಟಿ ರೂ.ಅನುದಾನ ಬೇಕಾಗಲಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ,ಎಸ್‌ಟಿ ರೈತರಿದ್ದಾರೆ. ಎಸ್‌ಸಿಪಿ,ಟಿಎಸ್‌ಪಿ ಯೋಜನೆಯಡಿ ಹೆಚ್ಚಿನ ಅನುದಾನ ತರಿಸಬೇಕು.ಕಾಳಸಂತೆಯಲ್ಲಿ ಬಿತ್ತ ನೆ ಬೀಜ ಮಾರಾಟವಾದರೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ವೈದ್ಯರು, ಸಿಬ್ಬಂದಿ, ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಔಷಧ ಕೊರತೆ ಆಗಬಾರದೆಂದರು.
ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಹಾಸ್ಟೆಲ್ ಆವರಣಗಳಲ್ಲೂ ಸಸಿ ನೆಡಬೇಕು ಎಂದರು. ರಾ.ಹೆ., ಬೆಸ್ಕಾಂ ಆರೋಗ್ಯ, ಕೌಶಲಾಭಿವೃದ್ಧಿ ಸೇರಿವಿವಿಧ ಇಲಾಖೆಗಳ ಮಾಹಿತಿ ಪಡೆದರು.
ಭದ್ರಾ ಮೇಲ್ದಂಡೆ ಯೋಜನೆ ವಿವರ ಪಡೆದ ಸಂಸದರು, ಘೋಷಿತ ಅನುದಾನ 5300 ಕೋಟಿ ರೂ. ಬಿಡುಗಡೆಗೆ ಕ್ರಮ ವಹಿಸುವುದಾಗಿ ಹೇಳಿದರು. 2026ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಎಸ್‌ಪಿ ಧರ್ಮೇಂದ್ರಕುಮಾರ್‌ಮೀನಾ, ಎಸಿ ಎಂ.ಕಾರ್ತಿಕ್, ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಇತರರು ಇದ್ದರು.