ಜಿಲ್ಲೆ

‘ನೀಟ್’ನಲ್ಲಿ ದುರ್ಗದ ಎಸ್‌ಆರ್‌ಎಸ್ ಕಾಲೇಜು ವಿದ್ಯಾರ್ಥಿಗೆ 85ನೇ ರ‌್ಯಾಂಕ್

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಎನ್.ವೈ.ಆನಂದ್ ನೀಟ್ ಪರೀಕ್ಷೆಯಲ್ಲಿ 85 ನೇ ರ‌್ಯಾಂಕ್ ದಾಖಲಿಸಿ ದ್ದಾರೆ. ಈ ಮೂಲಕ, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿರುವ ಮಧ್ಯ ಕರ್ನಾಟಕದ ಏಕೈಕ ಪಿಯು ಕಾಲೇಜು ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ಮೇ 4 ರಂದು ನಡೆದಿದ್ದ 2025 ನೇ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ(ನೀಟ್)ಫಲಿತಾಂಶ ಶನಿವಾರ ಪ್ರಕಟವಾಗಿ ದ್ದು,ಆನಂದ್ 85 ನೇ ರ‌್ಯಾಂಕ್ ಪಡೆಯುವ ಮೂಲಕ ತಾನು ಓದಿದ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕ್ರಮವಾಗಿ ಕಾಲೇಜಿನ ವಿದ್ಯಾರ್ಥಿಗಳಾದ ಎನ್.ನಯನಾ-1194, ಎ.ಮಹಾಲಕ್ಷ್ಮೀ-1672, ಬಿ.ನಯನಾ-1925,ಟಿ.ಛಾಯಾ-2855, ಬಿ.ಮಲ್ಲಿಕಾರ್ಜುನ ರೆಡ್ಡಿ-3599, ಕೆ.ಟಿ.ಮಾನಸಗಂಗಾ-4908, ತಳವಾರ ಪ್ರವೀಣ್-6537, ಅಮರೇಶ್-8728, ರಾಧಿಕಾ-9857ನೇ ರ‌್ಯಾಂಕ್‌ಗಳನ್ನು ಪಡೆದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ತಮ್ಮ ಕಾಲೇಜಿನ ಈ ವಿದ್ಯಾರ್ಥಿಗಳು ಮತ್ತೊಮ್ಮೆ ಉತ್ತಮ ಸಾಧನೆಯ ಇತಿಹಾಸ ಬರೆದಿದ್ದಾರೆ ಎಂದು ಎಸ್‌ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ನೀಟ್ ಪರೀಕ್ಷೆಗಾಗಿ ನಿರಂತರ ತರಬೇತಿ ಪಡೆದ ಕಾ ಲೇಜಿನ 80 ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 52 ವಿದ್ಯಾರ್ಥಿಗಳು ಅತ್ಯುತ್ತಮ ವೈದ್ಯ ಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವುದು ಹರ್ಷ ದಾಯಕ ಸಂಗತಿಯಾಗಿದೆ ಎಂದು ಆಡಳಿತ ಮಂಡಳಿ, ಬೋಧಕ, ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

---