ಜಿಲ್ಲೆ

ನೀಟ್ ಪರೀಕ್ಷೆಯಲ್ಲಿ ಎಪಿಜೆ ಪದವಿಪೂರ್ವ ಕಾಲೇಜಿನ ಸಾಧನೆ

Hassan - Ramesh H R

ಹಾಸನ: ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ನೀಟ್ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ರಾಜ್ಯಮಟ್ಟದ ಕೆ-ಸಿಇಟಿ ಪರೀಕ್ಷೆಯಲ್ಲಿ ಹಾಸನದ ಎಪಿಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ.
ರಚನಾ ಎಸ್ ಮೂರ್ತಿ ನೀಟ್ ಪರೀಕ್ಷೆಯಲ್ಲಿ 686 ಅಂಕಗಳನ್ನು ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನವನ್ನು, ಬಿಎನ್‌ವೈಎಸ್‌ನಲ್ಲಿ 116ನೇ ರ‌್ಯಾಂಕ್, ವೆಟರ್ನರಿ ವಿಭಾಗದಲ್ಲಿ 163ನೇ ರ‌್ಯಾಂಕ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ 1175ನೇ ರ‌್ಯಾಂಕ್ ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ಇನ್ನು ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಎಲ್.ಇಂಚರಾ ನೀಟ್ ಪರೀಕ್ಷೆಯಲ್ಲಿ 629 ಅಂಕಗಳನ್ನು ಗಳಿಸಿದ್ದಾರೆ, ಎಸ್. ಬಾನು ನೀಟ್ ಪರೀಕ್ಷೆಯಲ್ಲಿ 622 ಅಂಕಗಳನ್ನು ಗಳಿಸಿದ್ದಾರೆ ,ಬಿಎನ್‌ವೈಎಸ್ ವಿಭಾಗದಲ್ಲಿ 773ನೇ ರ‌್ಯಾಂಕ್, ವೆಟರ್ನರಿ ವಿಭಾಗದಲ್ಲಿ 1607 ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ 4123ನೇ ರ‌್ಯಾಂಕ್, ಕೆ.ಜೆ. ಜೀವಿಕಾ ನೀಟ್ ಪರೀಕ್ಷೆಯಲ್ಲಿ 600 ಅಂಕಗಳನ್ನು ಗಳಿಸಿದ್ದಾರೆ.
ರಿದಾ ಫಾತಿಮಾ ನೀಟ್ ಪರೀಕ್ಷೆಯಲ್ಲಿ 568 ಅಂಕಗಳನ್ನು ಗಳಿಸಿದ್ದಾರೆ. ರಾಶಿದ್ ಮೊಹಮ್ಮದ್ ಕಲಬುರ್ಗಿ ನೀಟ್ ಪರೀಕ್ಷೆಯಲ್ಲಿ 553 ಅಂಕಗಳನ್ನು ಗಳಿಸಿದ್ದಾರೆ. ಎಚ್.ವಿ. ಮನೋಜ್ ಎಂಜಿನಿಯರಿಂಗ್ ವಿಭಾಗದಲ್ಲಿ 1350ನೇ ರ‌್ಯಾಂಕ್, ಸಾತ್ವಿಕ್ ಜಿ ಆಚಾರ್ಯ ಎಂಜಿನಿಯರಿಂಗ್ ವಿಭಾಗದಲ್ಲಿ 1565ನೇ ರ‌್ಯಾಂಕ್, ಎಚ್. ರಮಿತ್ ಎಂಜಿನಿಯರಿಂಗ್ ವಿಭಾಗದಲ್ಲಿ 2294 ರ‌್ಯಾಂಕ್, ಎಚ್.ಕೆ. ಸಾನಿಕ ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ 2645ನೇ ರ‌್ಯಾಂಕ್, ಆದಿತ್ಯ ಪಿ ವಿಶ್ವಾಮಿತ್ರ ಎಂಜಿನಿಯರಿಂಗ್ ವಿಭಾಗದಲ್ಲಿ 2173ನೇ ರ‌್ಯಾಂಕ್, ಆರ್ಯನ್ ಕವನ್ ಗೌಡ ಎಂಜಿನಿಯರಿಂಗ್ ವಿಭಾಗದಲ್ಲಿ 3939ನೇ ರ‌್ಯಾಂಕ್, ವಿ. ರೋಹಿಣಿ ಎಂಜಿನಿಯರಿಂಗ್ ವಿಭಾಗದಲ್ಲಿ 3371ನೇ ರ‌್ಯಾಂಕ್, ಸಿ.ಕೆ. ವಿದ್ಯಾಶಂಕರ ಎಂಜಿನಿಯರಿಂಗ್ ವಿಭಾಗದಲ್ಲಿ 4026ನೇ ರ‌್ಯಾಂಕ್ ಗಳಿಸಿ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇನ್ನು ಹೆಚ್ಚಿನ ವಿದ್ಯಾರ್ಥಿಗಳು 10,000 ಒಳಗಿನ ರ‌್ಯಾಂಕ್ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡ ಎಪಿಜೆ ಕಾಲೇಜಿನ ಸಂಸ್ಥಾಪಕ ಡಿ.ಮುರಳಿ ಅವರು, ನಮ್ಮ ಸಂಸ್ಥೆಯಿಂದ 188 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 12 ವಿದ್ಯಾರ್ಥಿಗಳು 5000 ರ‌್ಯಾಂಕ್ ಒಳಗೆ ಸ್ಥಾನ ಪಡೆದಿದ್ದಾರೆ. 27 ವಿದ್ಯಾರ್ಥಿಗಳು 10,000 ಒಳಗಿನ ಉನ್ನತ ಸ್ಥಾನದ ರ‌್ಯಾಂಕ್ ಪಡೆದಿದ್ದಾರೆ. ಈ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆ, ಬೋಧಕ ವರ್ಗದ ಕಾಳಜಿ ಹಾಗೂ ಪೋಷಕರ ಸಹಕಾರಕ್ಕೆ ಹಿಡಿದ ಕನ್ನಡಿಯಾಗಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಎಪಿಜೆ ಕಾಲೇಜು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಸಾಧಕ ವಿದ್ಯಾರ್ಥಿಗಳನ್ನು ಹಾಸನದಿಂದ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಾಗೆಯೇ ಉತ್ತಮ ಸಾಧನೆ ಮಾಡಲು ಸಹಕರಿಸಿದ ಬೋಧಕ ವರ್ಗ ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.