ಭಾಲ್ಕಿ: ವಿಶೇಷವಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವವರು ಸರಳತೆ, ಸಹಜತೆ ಮೈಗೂಡಿಸಿಕೊಂಡು ನಿಸ್ವಾರ್ಥ ಭಾವನೆಯಿಂದ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಸದಾ ಗೌರವ ದೊರೆಯುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಎಂಆರ್‌ಎ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ವಯೋನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ ಅವರನ್ನು ಗೌರವಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನ ಪಿಯು ಫಲಿತಾಂಶ ವೃದ್ಧಿಸಲು ಎಲ್ಲರೂ ಒಮ್ಮತದಿಂದ ನೂತನ ಮಾದರಿ ಪ್ರಶ್ನೆ ಪತ್ರಿಕೆಗನುಗುಣವಾಗಿ ಕಲಿಕಾ ಕಾರ್ಯ ನಡೆಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಅಶೋಕ ರಾಜೋಳೆ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ಅವರ ವಯೋನಿವೃತ್ತ ಜೀವನದಲ್ಲಿ ಭಗವಂತ ಆಯೂರಾರೋಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ರಾಜ್ಯಪ್ರತಿನಿಧಿ ಪ್ರಭು ಎಸ್., ಜಿಲ್ಲಾ ನೋಡಲ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ, ಸಂಘದ ಕೋಶಾಧ್ಯಕ್ಷ ಸಂಗಪ್ಪ ಕೋರೆ, ತಾಲೂಕು ಪ್ರಾಚಾರ್ಯರ ಸಂಘದ ಅಧ್ಯಕ್ಷ ಜೈಕಾಂತ ಗಂಗೋಜಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಬಿರಾದಾರ, ಮಹಿಳಾ ಪ್ರತಿನಿದಿ ಮಲ್ಲಮ್ಮ ಆರ್.ಪಾಟೀಲ್, ಪ್ರಾಚಾರ್ಯ ಅಮರ ಹಲ್ಮಂಡಗಿ ಮಾತನಾಡಿದರು.
ಡೈಮಂಡ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಮಸ್ತಾನವಲಿ ಅಧ್ಯಕ್ಷತೆ ವಹಿಸಿದ್ದರು.
ವೈ.ಮಾಧವರಾವ, ವಸಂತರಾವ ಪಾಟೀಲ್, ಶಿವರಾಜ ಪಾಟೀಲ್, ವಿಜಯಕುಮಾರ ಪಾಟೀಲ, ಸುಖದೇವ ಬಿರಾದಾರ, ಬಾಲಾಜಿ ವಾಡೆಕರ್, ಧೊಂಡಿಬಾ ಭುಜಂಗೆ, ಪ್ರವೀಣ ಹಿರೇಮಠ, ಮಲ್ಲಿಕಾರ್ಜುನ, ಮಹಾದೇವ ಪಟ್ನೆ, ಶಿವರಾಜ ಬೆಲ್ಲಾಪುರೆ, ಶಿವರಾಜ ಬೋರಾಳೆ ಇತರರಿದ್ದರು.
ಮಾಧವರಾವ ಮೋರೆ ಸ್ವಾಗತಿಸಿದರು. ಆರ್.ಪಿ.ಮೋರೆ ನಿರೂಪಣೆ ಮಾಡಿದರು.ಸುಧೀರಕುಮಾರ ಸಂತಪುರೆ ವಂದಿಸಿದರು. ವಯೋನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.