ಆಳಂದ: ನೀರು, ಗಾಳಿ, ಬೆಳಕು ಮಾರಾಟದ ವಸ್ತು ಆಗಬಾರದು. ವಿಜ್ಞಾನ ಬೆಳೆಯುತ್ತಿದೆ ಆದರೆ ದಾರಿದ್ರÈದ ಕಡೆ ಹೋಗುತ್ತಿz್ದೆÃವೆ. ನಿಸರ್ಗವನ್ನು ಎದುರು ಹಾಕಿಕೊಂಡು ಜೀವನ ನಡೆಸುವುದು ಅಸಾಧ್ಯ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಜಿಡಗಾ ನವ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ 95ನೇ ಜಯಂತ್ಯುತ್ಸವ, ಸಿದ್ಧಶ್ರೀ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟನೆ, ಧಾರ್ಮಿಕಸಭೆಯಲ್ಲಿ ಮಾತನಾಡಿದರು.
ಜಿಡಗಾ ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಶಿವಯೋಗಿಗಳು ಆಶೀರ್ವಚನ ನೀಡಿ, ಜಿಡಗಾ ಮಠಕ್ಕೆ ಜಾತಿ ಧರ್ಮವಿಲ್ಲ, ಇಲ್ಲಿ ಎಲ್ಲರೂ ಒಂದೇ. ಸತ್ಯ, ನ್ಯಾಯ, ನಿಸರ್ಗದಿಂದ ನಡೆಯಬೇಕು ಎಂಬುವುದು ಭಕ್ತರು ಅರಿಯಬೇಕು ಎಂದರು.
ಚಿಣ್ಮಯಗಿರಿಯ ಶ್ರೀ ವೀರ ಮಹಾಂತ ಶಿವಾಚಾರ್ಯರು ಸ್ವಾಗತಿಸಿದರು. ಶಿವಾಚಾರ್ಯರ ಶಾಸ್ತಿçà ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಶ್ರೀ ಪರಮಾನಂದ ಸ್ವಾಮೀಜಿ, ಶ್ರೀ ಸಿದ್ಧಮ್ಮ ತಾಯಿ, ಶ್ರೀ ಜೇಮಸಿಂಗ್ ಮಹಾರಾಜ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಪಾಟೀಲ್, ಹಣಮಂತರಾವ ಭೂಸನೂರ, ರಾಜಶೇಖರ ಯಂಕAಚಿ, ಡಾ.ಸಂಗ್ರಾಮ ಬಿರಾದಾರ, ಡಾ.ವಿಕ್ರಂ, ಮಲ್ಲಿಕಾರ್ಜುನ ಮೇಟಿ ರಾಯಚೂರ, ಸಚಿನ ಗಣಾಚಾರಿ ಇತರರಿದ್ದರು.
ಮೂರು ಸಾವಿರ ಸಸಿ ವಿತರಣೆ: ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ ಜಯಂತಿ ನಿಮಿತ್ತ ಶಾಸಕ ಬಿ.ಆರ್.ಪಾಟೀಲ್ ಆಸೆಯಂತೆ ಶ್ರೀ ಡಾ.ಮುರುಘರಾಜೇಂದ್ರ ಶಿವಯೋಗಿಗಳಿಂದ ಭಕ್ತರಿಗೆ ಮೂರು ಸಾವಿರ ಸಸಿ ವಿತರಿಸಲಾಯಿತು. ಆರ್‌ಎಫ್‌ಓ ಜಗನ್ನಾಥ ಕೊರಳ್ಳಿ ಮತ್ತು ವೀರೇಂದ್ರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿದ್ದರು.
ಉಕ್ಕಡ ಪೊಲೀಸ್ ಠಾಣೆ ಉದ್ಘಾಟನೆ: ಜಿಡಗಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಉಕ್ಕಡ ಪೊಲೀಸ್ ಠಾಣೆ ಉದ್ಘಾಟಿಸಿದರು. 1992ರಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಜಿಡಗಾದಲ್ಲಿ ಠಾಣೆ ಪ್ರಾರಂಭಿಸಿದ್ದರು. ಅದರ ಕಾರ್ಯ ಸ್ಥಗಿತವಾಗಿತ್ತು. ಇದೀಗ ಮರು ಚಾಲನೆ ದೊರಕಿದ್ದು, ಸೂಕ್ತ ಸೌಲಭ್ಯ, ಸಿಬ್ಬಂದಿ ಒದಗಿಸುವಂತೆ ಶ್ರೀ ಡಾ.ಮುರುಘರಾಜೇಂದ್ರ ಶ್ರೀಗಳು ನುಡಿದರು. ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಭಾಸು ಚವ್ಹಾಣ್, ಪಿಐ ಮಹಾದೇವ ಪಂಚಮುಖಿ ಇತರರಿದ್ದರು.