ಜಿಲ್ಲೆ

ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ಗೆ ಉತ್ತಮ ಫಲಿತಾಂಶ

ಕೊಳ್ಳೇಗಾಲ: ಪಟ್ಟಣದ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ಮೊದಲ ಬ್ಯಾಚ್‌ನ ಬಿಸಿಎ ಹಾಗೂ ಬಿ.ಕಾಂ ವಿದ್ಯಾರ್ಥಿಗಳು 2025ರ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಿಸಿಎ ವಿಭಾಗದಲ್ಲಿ ಶೇ.97 ಫಲಿತಾಂಶ ಬಂದಿದ್ದು 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಅಪ್ಲಿಕೇಷನ್ ಪತ್ರಿಕೆಯಲ್ಲಿ 3 ವಿದ್ಯಾರ್ಥಿಗಳು, ಪಿಎಚ್ ಪಿ ಹ್ಯಾಂಡ್ ಮೈಎಸ್‌ಕ್ಯೂಲ್ ಪತ್ರಿಕೆಯಲ್ಲಿ 7 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಜೆ.ಭಾನುಪ್ರಿಯಾ 700 ಕ್ಕೆ 683 (ಶೇ.98), ಕೆ.ಸೃಷ್ಟಿ 680 (ಶೇ.97) ಎಫ್.ಫಿಜಿಯಾ ನಜೀಬಾ 676 (ಶೇ.97) ಅಂಕ ಗಳಿಸಿದ್ದಾರೆ.

ಬಿಕಾಂ ವಿಭಾಗದಲ್ಲಿ ಶೇ.92 ಫಲಿತಾಂಶ ದೊರೆತಿದ್ದು ಪರೀಕ್ಷೆ ಬರೆದ 105 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮ್ಯಾನೇಜ್‌ಮೆಂಟ್ ಅಕೌಂಟಿಂಗ್ ಪತ್ರಿಕೆಯಲ್ಲಿ 9, ಇಂಡಿಯನ್ ಅಕೌಂಟಿಂಗ್ ಸ್ಟಾೃಂಡರ್ಡ್ ಪತ್ರಿಕೆಯಲ್ಲಿ 4 , ಅಸೆಸೆಂಟ್ ಆಫ್ ಪರ್ಸನ್ ಪತ್ರಿಕೆಯಲ್ಲಿ ಒಬ್ಬ ವಿದ್ಯಾರ್ಥಿ, ಅಡ್ವಾನ್ಸಿಯಲ್ ಮ್ಯಾನೇಜೆಂಟ್ ಪತ್ರಿಕೆಯಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಜಿ.ಮಾನೋಜ್ 700ಕ್ಕೆ 684 (ಶೇ.98), ಡಿ.ತನುಶ್ರೀ 678 (ಶೇ.97), ಉಜ್ಯಾಬಾನು 675 (ಶೇ.96) ಅಂಕ ಗಳಿಸಿದ್ದಾರೆ.

ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ವಿಶೇಷಾಧಿಕಾರಿ ಡಾ.ನಾಗಭೂಷಣ್, ಪ್ರಾಂಶುಪಾಲ ಡಾ.ಡಿ.ಧನಂಜಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.