ಜಿಲ್ಲೆ

ನಿಷ್ಪಕ್ಷಪಾತವಾಗಿ ತನಿಖೆ‌ ನಡೆಯಲಿದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಅತ್ಯಂತ ಹೇಯ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಹತ್ಯೆಗೊಳಗಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಶನಿವಾರ ಭೇಟಿ ನೀಡಿ ಅವರು ಕುಟುಂಬಸ್ಥರಿಗೆ ಸಾಂತ್ವನ‌ ಹೇಳಿದರು.
ತನಿಖೆ ವಿಷಯದಲ್ಲಿ ಯಾರೂ ಸಂಶಯ ವ್ಯಕ್ತಪಡಿಸುವುದು ಬೇಡ. ನಿಷ್ಪಕ್ಷಪಾತ ಹಾಗೂ ಯಾರ ಹಸ್ತಕ್ಷೇಪ ಇಲ್ಲದ ರೀತಿಯಲ್ಲಿ ತನಿಖೆ‌ ನಡೆಸಲಾಗುವುದು. ನೇಹಾಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.
ಹತ್ಯೆಗೊಳಗಾದ ಒಂದು ಹೆಣ್ಣು ಜೀವಕ್ಕೆ ನ್ಯಾಯ ಒದಗಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ. ಈ ಘಟನೆಯಲ್ಲಿ ಕುಟುಂಬ ವರ್ಗದವರ ಜತೆ ಸರ್ಕಾರವಿದೆ ಎಂದು ಹೇಳಿದರು.