ಚಿಕ್ಕಬಳ್ಳಾಪುರ: ಪೊಲೀಸರು ಉತ್ತಮ ಕಾರ್ಯನಿರ್ವಹಣೆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು, ಜನ್ನಮನ್ನಣೆ ಗಳಿಸಬೇಕು ಎಂದು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಎನ್.ಶ್ರೀಧರ್ ಬಾಬು ಸಲಹೆ ನೀಡಿದರು.
ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ವಿಭಾಗದ ಎಎಸ್‌ಐ ಎಚ್.ನಂಜುಂಡಯ್ಯ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಕರ್ತವ್ಯ ನಿರ್ವಹಣೆಯ ಮೂಲಕ ಎಚ್.ನಂಜುಂಡಯ್ಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮುಖ್ಯಮಂತ್ರಿ ಪದಕ, ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ, ಇದನ್ನು ಮಾದರಿಯಾಗಿ ತೆಗೆದುಕೊಂಡು ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಎಎಸ್‌ಐ ಎಚ್.ನಂಜುಂಡಯ್ಯ ಮಾತನಾಡಿ, ಇಲಾಖೆಯ ಅಧಿಕಾರಿಗಳು ಮತ್ತು ಜನರ ಹೆಚ್ಚಿನ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ, ಇದೇ ಕರ್ತವ್ಯ ನಿಷ್ಠೆಗೆ ಪ್ರಮುಖ ಪ್ರೋತ್ಸಾಹ ನೀಡಿತು ಎಂದರು.
ಜಿಲ್ಲಾ ಕರವೇ ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಸಂಚಾಲಕ ಸುಬ್ರಮಣಿ, ತಾಲೂಕು ಅಧ್ಯಕ್ಷ ಮಹೇಶ್, ನಂದಿ ಹೋಬಳಿ ಅಧ್ಯಕ್ಷ ಚೇತನ್ ಮತ್ತಿತರರು ಇದ್ದರು.