ಜಿಲ್ಲೆ

ನಿಷ್ಕ್ರೀಯ ಖಾತೆಗಳ ಮೇಲೆ ವಂಚಕ ದೃಷ್ಟಿ !

ಅಶೋಕ ಶೆಟ್ಟರ, ಬಾಗಲಕೋಟೆ: ಜಿಲ್ಲೆಯ ಸರ್ಕಾರಿ ಇಲಾಖೆಗಳ ಖಾತೆಗಳಿಂದ ಹಣ ಲಪಟಾಯಿಸಿರುವ ಆರೋಪಕ್ಕೆ ಗುರಿಯಾಗಿರುವ ಇಲ್ಲಿನ ಐಡಿಬಿಐ ಬ್ಯಾಂಕಿನ ಕೆಲ ಸಿಬ್ಬಂದಿ ಅಕ್ರಮ ದಂಧೆ ಇದೀಗ ವಂಚಿಸಿರುವ ಹಣದ ಮೊತ್ತೆ ಐದಾರು ಕೋಟಿ ದಾಟಿಕೊಂಡು ಮುನ್ನುಗ್ಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಮೂರು ಖಾತೆಗಳಿಂದ ಹಣ ವರ್ಗಾವಣೆ ಮಾಡಿರುವ ಅಕ್ರಮ ದಂಧೆ ಬೆಳಕಿಗೆ ಬರುತ್ತಿದ್ದಂತೆ ಒಂದೊಂದೆ ಇಲಾಖೆಗಳು ಐಡಿಬಿಐ ಬ್ಯಾಂಕ್ ನಲ್ಲಿನ ತಮ್ಮ ಖಾತೆಗಳನ್ನು ಪರಿಶೀಲಿಸಿದಾಗ ಸದ್ಯ ಐದು ಇಲಾಖೆಗಳಿಗೆ ಐಡಿಬಿಐ ಸಿಬ್ಬಂದಿ ಶಾಮೀಲಾಗಿ ಪಂಗನಾಮ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ...!!

ಈ ಮೊದಲು ೨.೪೭ ಕೋಟಿ ರೂ. ವಂಚನೆಗೆ ಸಂಬಂಽಸಿದಂತೆ ಪ್ರವಾಸೋದ್ಯಮ ಇಲಾಖೆಯೂ ಜು. ೧೧ ರಂದು ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಮತ್ತಷ್ಟು ಇಲಾಖೆಗಳಲ್ಲಿ ಈ ರೀತಿ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಹಾಗೂ ಪಂಚಾಯಿತಿ ರಾಜ್ ಇಂಜನಿಯರಿಂಗ್ ವಿಭಾಗದಿಂದ ಸಿಇಎನ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಜವಳಿ ಮತ್ತು ಕೈಮಗ್ಗ ಇಲಾಖೆಯಲ್ಲಿ ವಾರ್ಷಿಕ ಲೆಕ್ಕಪರಿಶೋಧನೆಯೇ ನಡೆದಿಲ್ಲ ಎನ್ನಲಾಗುತ್ತಿದ್ದು, ಇದರಿಂದ ಎಷ್ಟು ಹಣವನ್ನು ವಂಚಿಸಿದ್ದಾರೆಂದು ಹುಡುಕಾಟದಲ್ಲಿ ತೊಡಗಿದ್ದು, ಈ ಇಲಾಖೆಗಳು ಇನ್ನೂ ಎ-ï ಐಆರ್ ದಾಖಲಿಸಲ್ಲ.

ಉತ್ತಮ ಸೇವೆಯ ನೆಪ, ಖಾತೆಗೆ ಕನ್ನ :
ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳು ರಾಷ್ಟ್ರೀಯ ಬ್ಯಾಂಕ್ ಗಳನ್ನು ಬಿಟ್ಟು ಐಡಿಬಿಐ ಬ್ಯಾಂಕ್ ನಲ್ಲೆ ಬಹುತೇಕ ಖಾತೆಗಳನ್ನು ತೆರೆಯಲು ಕಾರಣವೇನು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಕೆಲ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸರಿಯಾದ ಸ್ಪಂದನೆ ನೀಡದೇ ಸತಾಯಿಸುವುದು, ಬಹಳ ಹೊತ್ತು ಕಾಯಿಸುತ್ತಾರೆ ಎನ್ನುವ ಅಪವಾದ ಇದೆ. ಆದರೆ, ಐಡಿಬಿಐ ಬ್ಯಾಂಕ್ ಇಲಾಖೆ ಕಚೇರಿಗೆ ತೆರಳಿಯೇ ಸೇವೆ ಕೊಡುತ್ತಿದ್ದರು. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಂದಾಜು ೬೦ ಕ್ಕೂ ಹೆಚ್ಚು ಖಾತೆಗಳು ಐಡಿಬಿಐ ಬ್ಯಾಂಕ್ ನಲ್ಲಿ ತೆರೆಯಲಾಗಿತ್ತು.

ವಿಶ್ವಾಸ ಮೂಡಿಸಿ ವಂಚನೆ :
ಉತ್ತಮ ಸೇವೆ ಕೊಡುತ್ತೇವೆ ಎನ್ನುವ ಕಾರಣವೇ ಬ್ಯಾಂಕಿನ ಕೆಲ ಸಿಬ್ಬಂದಿ ಸಂದರ್ಭ ದುರುಪಯೋಗ ಪಡಿಸಿಕೊಂಡು ವಿವಿಧ ಇಲಾಖೆ ಹಣಕ್ಕೆ ಕನ್ನ ಹಾಕಿದ್ದಾರೆ. ಮುಖ್ಯವಾಗಿ ಇಲಾಖೆಗಳ ವಿವಿಧ ಯೋಜನೆ ಅಡಿಯಲ್ಲಿ ಖಾತೆ ತೆರೆದಿದ್ದು, ಆ ಯೋಜನೆ ಕಾಮಗಾರಿ ಮುಕ್ತಾಯವಾಗಿ ಆ ಖಾತೆಯ ವಹಿವಾಟು ಬಂದ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಆ ಖಾತೆಯಲ್ಲಿ ಇರುವ ಹಣವನ್ನು ಲಪಟಾಯಿಸುತ್ತ ಬಂದಿದ್ದರು. ಹೀಗಾಗಿ ಬ್ಯಾಂಕ್ ಸಿಬ್ಬಂದಿಯೇ ಇಲಾಖೆ ಕಚೇರಿಗೆ ಬಂದು ಸ್ಟೇಟ್ ಮೆಂಟ್ ಕೊಟ್ಟು ಹೋಗುತ್ತಾರೆ. ಹೀಗಾಗಿ ಅಲ್ಲಿ ಯಾವುದೇ ಮೋಸ ಆಗಿರಲ್ಲ ಎನ್ನುವ ಖಾತರಿಯಲ್ಲಿ ಇಲಾಖೆ ಅಽಕಾರಿಗಳು ನಿರ್ಲಕ್ಷ್ಯ ವಹಿಸಿದ್ದೆ ಬ್ಯಾಂಕ್ ಸಿಬ್ಬಂದಿ ಅಕ್ರಮ ವಹಿವಾಟು ನಡೆಸಲು ಅನುಕೂಲವಾಗಿತ್ತು ಎನ್ನುವುದು ಸದ್ಯ ತನಿಖೆಯ ವೇಳೆ ಪೊಲೀಸರು ಕಂಡುಕೊಂಡಿದ್ದಾರೆ.

ಮಹಿಳಾ ಅಽಕಾರಿ ಪೊಲೀಸ್ ವಶಕ್ಕೆ :
ಐಡಿಬಿಐ ಬ್ಯಾಂಕ್ ನ ಸಿಬ್ಬಂದಿ ಶಾಮೀಲಾಗಿ ವಿವಿಧ ಇಲಾಖೆಗಳ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಬ್ಬರು ಬ್ಯಾಂಕ್ ಅಽಕಾರಿಗಳು ಸೇರಿದಂತೆ ಒಟ್ಟು ೮ ಜನರನ್ನು ಪೊಲೀಸರು ಬಂಽಸಿದ್ದರು. ಆದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಅವರೆಲ್ಲ ಹೊರಗಡೆ ಇದ್ದಾರೆ. ಇದೇ ಅಕ್ರಮಕ್ಕೆ ಸಂಬಂಽಸಿದಂತೆ ಇದೀಗ ಸಿಇಎನ್ ಪೊಲೀಸರು ಮತ್ತೊಬ್ಬ ಆರೋಪಿ ಐಡಿಬಿಐ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕಿ ಆಗಿರುವ ಸರಸ್ವತಿ ಎನ್ನುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಐಡಿಬಿಐ ಬ್ಯಾಂಕ್ ಹಗರಣ ಹೊರಗೆ ಬರುತ್ತಿದ್ದಂತೆ ಕರ್ತವ್ಯಕ್ಕೆ ಬಾರದೇ ತಲೆಮರೆಸಿಕೊಂಡಿದ್ದ ಮಹಿಳಾ ಅಽಕಾರಿ ತಮ್ಮ ಊರಾದ ಚಿತ್ರದುರ್ಗದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಅಲ್ಲಿಗೆ ತೆರಳಿ ಅವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಿಂದ ಈ ವರೆಗೂ ಐಡಿಬಿಐ ಬ್ಯಾಂಕ್ ನಿಂದ ಹಣ ವರ್ಗಾವಣೆಗೆ ಸಂಬಂಽಸಿದಂತೆ ಬಂಧನಕ್ಕೆ ಒಳಪಟ್ಟವರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ.