ಕಲಬುರಗಿ: ಶರಣರ ಬದುಕು ಬರಿ ಉಪಜೀವನದ ಚಿಂತೆಯಿಂದ ಕೂಡಿದ ಬದುಕಾಗಿರಲಿಲ್ಲ. ಧನ ಕನಕ ವಜ್ರ ವೈಡರ‍್ಯ ಬೇಕೆಂದು ಹಪಹಪಿಸುವ ಲೋಕದ ಮಾನವರಿಗೆ ಬದುಕು ಕಾಠಿಣ್ಯದ ಬದುಕಾಗಿ ಕಾಣುತ್ತದೆ. ಶರಣರಿಗೆ ಯಾವ ಚಿಂತೆಗಳು ಇರಲಿಲ್ಲ, ಆದ್ದರಿಂದ ಅವರು ನಿಶ್ಚಿಂತೆಯ ಜೀವನ ಬದುಕಿದರು ಎಂದು ಬಸವ ಬೆಳವಿಯ ಶ್ರೀ ಶರಣಬಸವ ಸ್ವಾಮೀಜಿ ನುಡಿದರು.
ಜಯನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಒಂದು ತಿಂಗಳರ‍್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಇಪ್ಪತ್ತನೇ ದಿನವಾದ ಶುಕ್ರವಾರ ಮಾತನಾಡಿ, ವಿಜ್ಞಾನದ ಪ್ರಕಾರ ಮಾನವರು ಹುಟ್ಟುವುದಕ್ಕಿಂತ ಮುಂಚೆ ಈ ಭೂಮಿ ಪ್ರಕೃತಿ ಹುಟ್ಟಿದೆ. ಭೌತಿಕ ಪ್ರಪಂಚ ನಶಿಸಬಹುದು, ಬಯಲು ಶಾಶ್ವತವಾಗಿದೆ. ಪ್ರಪಂಚದಲ್ಲಿ ಪ್ರತಿ ಬದಲಾವಣೆ ಹೊಂದುತ್ತದೆ ಅದುವೇ ಮಾಯೆ ಎಂದರು.
ಮಾಯೆ ಮನುಷ್ಯನೊಳಗಿದೆ, ಮನುಷ್ಯ ಮಾಯೆಯೊಳಗಿದ್ದಾನೆ. ಮನುಷ್ಯನಿಗೆ ಜೀವನ ಅಶಾಶ್ವತವೆಂದು ಗೊತ್ತಿದೆ. ಆದರೂ ಮಾನವ ಬದುಕಿನ ಬಗ್ಗೆ ಚಿಂತಿಸುತ್ತಿರುತ್ತಾನೆ. ಬದುಕು ನಮ್ಮನ್ನು ಹಿಡಿದುಕೊಂಡಿದೆ ಎನ್ನುತ್ತಾರೆ, ಆದರೆ ಬದುಕಿಗೆ ನಾವೇ ಹಿಡಿದುಕೊಂಡಿದ್ದೇವೆ. ನಾನೆಂಬುದು ಮಾಯೆ ಎಂದರು.
ಮನುಷ್ಯ ಜೀವನಕ್ಕೆ ಹೆದರಿ ಬದುಕಬಾರದು. ಅದು ಶಿವಮಯವೆಂದು ಬದುಕಬೇಕು. ಎಲ್ಲವನ್ನು ತೊರೆದು ನಾನು ಜಗವ ಬಿಟ್ಟು ಹೋಗಲೇ ಬೇಕೆಂಬ ಸತ್ಯ ಅರಿತು ಬದುಕುವುದೇ ಜೀವನ. ಗುಬ್ಬಿ ಬೇರೆಯವರ ಮನೆಯಲ್ಲಿ ಗೂಡು ಕಟ್ಟಿ ತನ್ನ ಮನೆ ಎಂಬ ಭ್ರಮೆಯಲ್ಲಿರುವಂತೆ, ಪರಮಾತ್ಮನ ಜಗದಲ್ಲಿ ಮನೆ ಕಟ್ಟಿದ ವ್ಯಕ್ತಿ ತನ್ನ ಮನೆ ಎಂಬ ಭ್ರಮೆಯಲ್ಲಿರುತ್ತಾನೆ. ಆದ್ದರಿಂದ ರ‍್ವ ಕೃತ್ಯ ಪರಮಾತ್ಮ ನಂಬಿ ಧ್ಯಾನಿಸಿ ಪೂಜಿಸಿ ಬದುಕಬೇಕು ಎಂದರು.
ಬಸವ ಸಮಿತಿ ಅಧ್ಯಕ್ಷ ಡಾ.ವಿಲಾಸವತಿ ಖೂಬಾ, ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ, ಕರ‍್ಯರ‍್ಶಿ ಡಾ.ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ್ ಪಾಳಾ, ಡಾ.ಕೆ.ಎಸ್.ವಾಲಿ, ಬಂಡಪ್ಪ ಕೇಸೂರ ಇತರರಿದ್ದರು.