ಜಿಲ್ಲೆ

ನಿವೇಶನ,ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

ಚಿತ್ರದುರ್ಗ: ನಗರದ ಸಾವಿರಾರು ಬಡ ಕುಟುಂಬಗಳಿಗೆ ನಿವೇಶನ, ವಸತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜನ ಶಕ್ತಿ ಸಮಿತಿ ಸದಸ್ಯ ಟಿ.ಶಫಿ ವುಲ್ಲಾ, ಜಿಲ್ಲಾ ಸಮಿತಿ ಪ್ರಮುಖರಾದ ಎನ್.ಜ್ಯೋತಿ, ಪುರುಷೋತ್ತಮ ತೋರಣಗಟ್ಟ, ಸ್ನೇಹ, ದುರುಗೇಶ್, ಅಶ್ವಿನಿ, ನಜ್ಮಾ, ತದ್ರಿನ್‌ತಾಜ್, ಕರಿಯಪ್ಪ ಮತ್ತಿತರರು ಇದ್ದರು.