ಚಿತ್ರದುರ್ಗ: ನಗರ ವ್ಯಾಪ್ತಿಯ ವಾರ್ಡ್‌ಗಳ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ನಗರಸಭೆ ಇಂಜಿನಿಯರ್ ರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಎಐಟಿಯುಸಿ ಅಧ್ಯಕ್ಷ ಬಿ. ಬಸವರಾಜಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ಸಹ ಕಾರ್ಯದರ್ಶಿ ಬಿ.ಎಚ್. ಹನುಮಂತಪ್ಪ, ತಾಲೂಕು ಕಾರ್ಯದರ್ಶಿ ಟಿ.ಆರ್. ಉಮಾಪತಿ, ಸಹ ಕಾರ್ಯದರ್ಶಿಗಳಾದ ಸತ್ಯಕೀರ್ತಿ, ಜಯದೇವಮೂರ್ತಿ, ಮುಖಂಡರಾದ ಎಂ.ಆರ್. ಬಾಬು, ರಾಮಕೃಷ್ಣ, ಶಶಿಧರ್ ಇತರರಿದ್ದರು.