ಜಿಲ್ಲೆ

ನಿವೃತ್ತಿ ನಂತರದ ಜೀವನ ಆಶಾದಾಯಕವಾಗಿರಬೇಕು: ಪ್ರೊ. ಟಿ.ಪಿ. ಪುಟ್ಟರಾಜು

ಹಾಸನ: ಸರ್ಕಾರಿ ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ ನಿವೃತ್ತಿ ನಂತರದ ಜೀವನ ಆಶಾದಾಯಕವಾಗಿರಬೇಕು ಎಂದು ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಸಂಘದ ವತಿಯಿಂದ ಇತ್ತೀಚೆಗೆ ಇತಿಹಾಸ ವಿಭಾಗದದಲ್ಲಿ ಸೇವೆ ಸಲ್ಲಿಸಿ ನಿವೃತ್ತ ರಾದ ಸಹಪ್ರಾಧ್ಯಾಪಕ ಎಂ.ಆರ್. ರಂಗಸ್ವಾಮಿವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜಿಗೆ ಬಂದ ಅಂದಿನಿಂದ ಇಂದಿನವರೆಗೆ ಕುಟುಂಬದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿ ಸರ್ಕಾರಿ ಸೇವೆಯಲ್ಲಿ ಆಗುವಂತದ್ದು, ನಿವೃತ್ತಿ ನಂತರದ ದಿನಗಳು ಉತ್ತಮವಾಗಿರಲಿ ಎಂದು ಶುಭಕೋರಿದರು.

ನಿವೃತ್ತಿ ಹೊಂದಿದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆಯ ವೃತ್ತಿ ಆರಂಭಿಸಿದಂದಿನಿಂದ ಇಂದಿನವರೆಗೆ ವೃತ್ತಿ ಬದುಕಿನಲ್ಲಿ ಸಹಕರಿಸಿದ ಎಲ್ಲರಿಗೂ ವಂದಿಸಿ, ಕಾಲೇಜಿನಲ್ಲಿ ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪ್ರಾಥಮಿಕ ಶಿಕ್ಷಣದಿಂದ ಇಲ್ಲಿಯವರೆಗೆ ಸಹಕರಿಸಿದ ಹಿತೈಷಿಗಳು, ಕುಟುಂಬವರ್ಗದವರಿಗೆ ಧನ್ಯವಾದಗಳಲ್ಲಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಶೈಕ್ಷಣಿಕ ಡೀನ್‌ಡಾ. ಎಂ.ಬಿ. ಇರ್ಷಾದ್, ಪರೀಕ್ಷಾ ನಿಯಂತ್ರಕ ಡಾ. ಕೆ.ಡಿ. ಮುರುಳಿಧರ್, ಎಂ.ಆರ್. ರಂಗಸ್ವಾಮಿ ಅವರ ಪತ್ನಿ ಶಿಕ್ಷಕಿ ಸುಧಾಮಣಿ ಪ್ರಾಧ್ಯಾಪಕರಾದ ಚಂದ್ರಕಲಾ, ಸವಿತಾ, ಜಿ.ಇ. ಸುನೀತಾ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಗೋಪಾಲ್ ಇತರರು ಇದ್ದರು.