ಕಲಬುರಗಿ: ದೇಶದಲ್ಲಿ ಕೈಗಾರಿಕೆ, ಸಾರ್ವಜನಿಕ ವಲಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಿಶ್ಚಿತ ಪಿಂಚಣಿ ಅಡಿ ಪ್ರತಿ ತಿಂಗಳು ಉದ್ಯೋಗಿಗಳಿಂದ ಭವಿಷ್ಯ ನಿಧಿ ಕಡಿತ ಮಾಡಿಕೊಳ್ಳುತ್ತಿದ್ದು, ನಿವೃತ್ತಿ ನಂತರ ಕೇವಲ ೧,೧೭೦ ರೂ. ಪಿಂಚಣಿ ನೀಡುತ್ತಿರುವುದು, ದುರದೃಷ್ಟಕರ. ಕೂಡಲೇ ೭,೫೦೦ ಮಾಸಿಕ ಪಿಂಚಣಿ ನೀಡಬೇಕು ಎಂದು ಇಪಿಎಸ್-೯೫ ರಾಷ್ಟಿçÃಯ ಸಂಘರ್ಷ ಸಮಿತಿ (ನ್ಯಾಕ್) ಅಧ್ಯಕ್ಷ ಕಮಾಂಡರ್ ಅಶೋಕ ರಾವತ್ ಆಗ್ರಹಿಸಿದರು.
ದೇಶದಲ್ಲಿ ೨೯.೮೮ ಕೋಟಿ ಉದ್ಯೋಗಿಗಳಿಂದ ಭವಿಷ್ಯ ನಿಧಿ ಹಣ ಕಡಿತಗೊಳಿಸಲಾಗುತ್ತಿದೆ. ದೇಶದಲ್ಲಿ ೭.೮ ಕೋಟಿ ಜನ ಅರ್ಹರಿದ್ದಾರೆ. ಆದರೆ ದೇಶದಲ್ಲಿ ಪ್ರಸ್ತುತ ೭೮ ಲಕ್ಷ ಜನ ನಿವೃತ್ತ ನೌಕರರಿಗೆ ೨ ಸಾವಿರಕ್ಕಿಂತ ಕಡಿಮೆ ಪಿಂಚಣಿ ನೀಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಪ್ರತಿ ಉದ್ಯೋಗಿಯ ಕನಿಷ್ಠ ೨೦ ಲಕ್ಷ ರೂ. ಇದೆ. ಅದರ ಬಡ್ಡಿ ನೀಡಿದರೂ ಸಾಕಾಗುತ್ತದೆ. ೫೦ ಸಾವಿರ ವೇತನ ಪಡೆಯುತ್ತಿದ್ದ ವ್ಯಕ್ತಿ ಸಾವಿರ ರೂ.ನಲ್ಲಿ ಹೇಗೆ ಜೀವನ ನಡೆಸಬೇಕು. ನಮ್ಮ ಸಂಗ್ರಹ ಇರುವ ಹಣದಲ್ಲೇ ಪಿಂಚಣಿ ನೀಡಿದರೂ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ ಎಂದರು.
ಸಮಿತಿ ರಾಷ್ಟಿçÃಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ನಿವೃತ್ತ ಉದ್ಯೋಗಿಗಳು ಭವಿಷ್ಯ ನಿಧಿಗೆ ಹಣ ನೀಡಿದ್ದರೂ, ಸಂಕಷ್ಟದ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಶೇ.೨೫ ಉದ್ಯೋಗಿಗಳು ಮೃತಪಟ್ಟಿದ್ದಾರೆ. ಕನಿಷ್ಠ ಮಾತ್ರೆ ಖರೀದಿಗೂ ಪಿಂಚಣಿ ಹಣ ಸಾಲುತ್ತಿಲ್ಲ. ಸರ್ಕಾರ ನಮ್ಮ ಹಣ ನಮಗೆ ವಾಪಸ್ ನೀಡಲಿ ಎಂದು ಆಗ್ರಹಿಸಿದರು.